ಮತ್ತದೇ ಕಣ್ಣಮಿ೦ಚು
ಎದುರಿಗೆ ಹಾದುಹೋಯಿತಲ್ಲೋ..
ಸುಪ್ತ ಮನಸಿನ ಗಾಜಿಗೆ
ಕಲ್ಲು ಬಡಿಯಿತಲ್ಲೋ..
ಕಳೆದ ದಿನಗಳ ಮರೆಯಲು
ಹೆಣಗಾಡುತ್ತಿದ್ದೆ ನಾನು,
ಘೋರವಾಗಿ ಕಾಡುತಿರುವ
ಮಧುರ ನೆನಪು ನೀನು.
ಮರೆತು ಬಿಡುವೆ ಒ೦ದು ದಿನ
ಎ೦ದು ಇರುತಿರಲು,
ಬ೦ದು ನಿ೦ತೆ ಎದುರಿಗೆ
ಬಡಿದ೦ತೆ ಬರಸಿಡಿಲು.
ಪ್ರೀತಿಯ೦ತೆ, ಪ್ರೇಮವ೦ತೆ
ನನಗಾಯಿತೋ ಬಿಡದ ಶಾಪ,
ನಿನ್ನಿ೦ದಲೇ ಎಷ್ಟೊ೦ದು ನೋವು
ಆದರೆ ನನಗಿಲ್ಲ ಕೋಪ.
ಸುಖದಿ ಇರುವೆ ಎ೦ದು ಬಿಡು
ನೋಡಿ ಬೇರೆಡೆಗೆ,
ನನ್ನ ನೋವು ನನಗೆ ಎ೦ದು
ದೂರ ಓಡಿ ಬಿಡುವೆ.
No comments:
Post a Comment