ಚಿಟಪಟ ಜಿನುಗುವ ಮಳೆಯಲ್ಲಿ
ಬೆಳ್ಳಿ ಕಾಲ್ಗೆಜ್ಜೆ ತೊಟ್ಟಿರುವ ಅತಿ ಮೆತ್ತನೆ
ಪಾದಗಳನ್ನು ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತ
ಬರುವಾಗ ನಿನ್ನ ನಾ ಮೊದಲ ಬಾರಿ ಕಂಡೆ..
ಏನೆಂದು ವರ್ಣಿಸಲಿ ನಾ ನಿನ್ನ ಅಂದವನು..
ಆ ಮಳೆಯಲಿ ನನ್ನ ನಾ ಮರೆತು ನೆನೆಯುತ್ತಿದ್ದೆ
ನನ್ನ ಪಕ್ಕದಲ್ಲಿ ನೀ ನಡೆದು ಹೋದಾಗ ನಿನ್ನ
ಕೇಶರಾಶಿ ಮುಖವ ಸೋಕಿ ಧನ್ಯನಾದೆ..
ಬಾನಿಂದ ಇಳಿದು ಬಂದ ಅಪ್ಸರೆಯ ನೀ..
ಇಲ್ಲ ಗಂಧರ್ವ ಕನ್ಯೆಯ ನೀ..
ಮಿಂಚಿನಂತೆ ಹಾಗೆ ಬಂದು ಹೀಗೆ ಹೋಗದೆ..
ಸದಾ ಕಾಲ ನನ್ನ ಹೃದಯ ಮಂದಿರದಲ್ಲಿರುವೆಯ??
No comments:
Post a Comment