Friday, January 21, 2011

ನೆನಪಿನ ದೋಣಿಯಲಿ….

      ಜೀವನದ ಪಯಣದಲ್ಲಿ ಬಂದು ಹೋದ ಎಷ್ಟೋ ಜೀವಗಳು, ಘಟನೆಗಳು ನೆನಪುಗಳಾಗಿ ಉಳಿದು ಬದುಕನ್ನು ಹೊಸ ದಿಗಂತಕ್ಕೆ ತಲುಪಿಸುತ್ತದೆ. ಆ ನೆನಪಿನ ದೋಣಿಯಲಿ ಒಂದು ಸುಂದರ ವಿಹಾರ…


ಸಾಗಲಿ ಗುರಿ ಸೇರಲಿ
ಬಾಳಿಗೊಂದು ಗುರಿ ಇರಲಿ,
ಆ ಗುರಿಯ ಸೇರೋ ಛಲಹ ಒಂದು ನಿನಗಿರಲಿ !!ಪ !!


ಆಗುವದೋ, ಹೋಗುವದೆ, ಎಂಬ ಅಳಕು ದುರಿರಲಿ,
ಎಡರುಗಳು, ತೊಡರುಗಳು, ಅಡಿಗಡಿಗೆ ಬರಬಹುದು
ಬೆಚ್ಚದಿರು, ಬೆದರದಿರು!
ಎದುರಿಸಿ, ನೀ ನಡೆದರೆ ಜಯವಗುವದು !!ಪ !!


ಜಯಸಿದ ಬಳಿಕ! ಮರೆಯದಿರು ಮೈ ಮರೆಯದಿರು!
ಮರೆತವರೆಲ್ಲಾ ನೀ ಅಳಿಯದಿರು!
ಸತ್ಯವ ನೀ ಮರೆಯದಿರು,  ಸತ್ಯವ ಮರೆಯದಿರು !!ಪ !!

     

       ಭಾರತವು ವಿಶಾಲವಾದ ದೇಶ, ಅದು ಉತ್ತರಕ್ಕೆ ಹಿಮಾಲಯದಿಂದ ಆವೃತವಾಗಿದೆ , ಹಾಗೂ ಮೂರೂ ಬಾಗ ಸಮುದ್ರದಿಂದ ಆವೃತವಾಗಿದೇ, ಪೂರ್ವಕ್ಕೆ ಅರಬ್ಬೀ ಸಮುದ್ರ, ಪಶ್ಚಿಮಕ್ಕೆ ಬಂಗಾಳಕೊಲ್ಲಿ, ಹಾಗೂ ದಷ್ಕಿನಕ್ಕೆ ಹಿಂದುಮಹಸಗರದಿಂದಾ  ಆವೃತವಾಗಿದೆ,

        ಪ್ರಪಂಚದಲ್ಲಿ ನಮ್ಮ ಭಾರತ ದೇಶವು ಶೇ ೨.೪% ರಷ್ಟು  ಭುಬಾಗವನ್ನು ಹೊಂದಿದೆ, ಇದರ ಅಂದರೆ ಭಾರತ ದೇಶದ ಒಟ್ಟು ವಿಸ್ತಿರಣ ೩೨.೮೭.೨೬೩ ಚ, ಕಿ, ಮಿ. ಇದು ವಿಸ್ತಿರಿಸಿದೆ, ಸುಮಾರಾಗಿ ಭಾರತ ದೇಶಕ್ಕೆ ಭಾರತ ಎಂದು ಬರಲು ಕಾರಣವೇನೆಂದರೆ, ರಾಮಾಯಣದಲ್ಲಿ ಧಶರಥನ ಮಕ್ಕಳಾದ ಭರತ, ಶ್ರೀರಾಮ, ಲಷ್ಕಮನ, ಈ ಮೂವರಲ್ಲಿ ಧಶರಥನ ಮಾತಿನಂತೆ ಶ್ರೀರಾಮ, ಕಾಡಿಗೆ ಹೋದಾ, ಶ್ರೀರಾಮ ಆಜ್ಞೆಯಂತೆ ಭರತ ರಾಜ್ಯಬಾರ ಮಾಡಿದನು, ಭರತನ್ನಲಿದ  ದೇಶವನ್ನು ಭಾರತ ಎಂದು ಕರೆಯಲಾಗಿದೆ,
        " ಭಾರತ ಭೂಮಿ ನನ್ನ ತಾಯಿ, ನನ್ನ ಪೊರೆವ ತೊಟ್ಟಿಲು " ಜೀವನವನ್ನೇ ದೇವಿಗೆ ಎರೆವೆ, ಅವಳ ಖ್ಯಾತಿ ಹೆಚ್ಹಿಸಲು ಕನ್ನಡದ ಕನ್ಮನಿಗಳಾದ, ಕುವೆಂಪು, ದ.ರಾ.ಬೇಂದ್ರೆ, ಗಿರೀಶ್ ಕಾರ್ನಾಡ, ವಿ.ಕೃ. ಗೋಕಾಕ್. ಇನ್ನೂ ಮುಂತಾದವರು. ಅಮರಗಿತೆಯೊಂದಿಗೆ ತಮ್ಮ ಸಾಲುಗಳಾಗಿ, ಕರ್ನಾಟಕ ಸಂಷ್ಕ್ರುತಿಯ ಸ್ವರೂಪ ಅದರ ಬಣ್ಣ ಬಣ್ಣದ ಒಡಲನ್ನು ಚಿತ್ರವತ್ತಾಗಿ, ನೆಯ್ದಿರುವ ಅದರ ಹಾಸು ಹೊಕ್ಕಿನ ಎಳೆಗಳು ಭಾರತೀಯ ಸಂಯುಕ್ತ ಶರೀರವನ್ನು ಕರ್ನಾಟಕ ಅಲಂಕರಿಸಿದೆ.
        ಭರತ ಖಂಡದ ಸಂಸೃತಿ ವಿಶ್ವದ ಅನೇಕ ಪ್ರಾಚಿನ ಸಂಸ್ಕ್ರತಿಗಿಂತಲೂ ಪ್ರಾಚಿನ, ಅಧುನಿಕ, ಸಂಸ್ಕ್ರತಿಗಿಂತಲೂ ಆಧುನಿಕ,  ಕಾಲದಲ್ಲಿ ಪ್ರಾಚಿನ ದೃಷ್ಟಿಯಲ್ಲಿ ಆದುನಿಕವಾದ ಭಾರತೀಯ  ಸಂಸ್ಕ್ರತಿಯು ಪ್ರಾಚಿನ ಆರ್ವಚಿನಗಲೆರದನ್ನು, ಹೊಂದಿದ ಸಾಮರಸ್ಯದ ಶಕ್ತಿ ಭಾರತೀಯ  ಸಂಸ್ಕ್ರತಿಗಿದೆ, ಹಳೆ ಬೇರು ಹೊಸ ಚಿಗುರುಗಳು, ಎರಡು ಸೇರಿವೆ.
        ಜಗತ್ತಿನ ಉಳಿದ ಖ್ಯಾತ ಸಂಸ್ಕ್ರತಿಗಳಂತೆ ಕಾಲ ಪ್ರವಾಹದಲ್ಲಿ ಭಾರತೀಯ ಸಂಸ್ಕ್ರತಿಯು ಕೊಚ್ಚಿ ಹೋಗಿದೆ, ಅನುಬವದಿಂದ ಪರಿಪುಷ್ಟಗೊಲ್ಲುತ್ತ, ಬೆಳೆದು ಬಂದಿದೆ, ಅನೇಕ ಅಘಾತಗಳನು ಏದುರಿಸಿಯು ತನ್ನ ಚೇತನವನ್ನು ಉಳಿಸಿಕೊಂಡು ಬಂದಿದೆ ಕಾಲದ ಪ್ರವಾಹದಲ್ಲಿ ಚಿರಂತನವಾಗಿ ಉಳಿಯುವಂತ ತನ್ನ ಮೂಲಭೂತ ಮೊಲ್ಯಗಳನ್ನು ಉಳಿಸಿಕೊಂಡು ಅಳವಡಿಸಬೇಕೊಂದು, ಬದುಕತ್ತಲಿದೆ. ಈ ಸಂಸ್ಕ್ರತಿಯು ಈ ಸಂಸ್ಕ್ರತಿಯ ವ್ರುಷ್ಕಕ್ಕೆ ಪೆಟುಗಳು ಬಿದ್ದಾಗಲೆಲ್ಲಾ ಹೊಸ ಶಾಲೆಗಳು ಕವಲೊಡೆದು ನಳನಳಿಸಿ ಬೆಳೆದಿದೆ.
       ಭಾರತವು ವಿಶಾಲತೆ, ಅಲ್ಲಿರುವ ವೈವಿಧ್ಯತೆ ಅವುಗಳ ಮದ್ಯೆ ಏಕಸುತ್ರವನ್ನು ಹೊಂದಿದ ಭಾರತ ಸಂಸ್ಕ್ರತಿ ದೃಷ್ಟಿಗಳು ಸೇರಿ ಸಮಷ್ತಿಯಾಗಿದೆ, "ಸಮಗ್ರತೆ " ಭಾರತೀಯ ಸಂಸ್ಕ್ರತಿಯ ವೈಶಿಷ್ಯ " ವಿಪುಲತೆ " ಭಾರತೀಯ ಸಂಸ್ಕ್ರತಿಯ ಇನೊಂದು "ವಿಭಿನ್ನತೆ" ಈ ಸಂಸ್ಕ್ರತಿಯ ಹಿರಿದಾದ ಮತ್ತೊಂದು ವೈಶಿಷ್ಕ್ತಿವಾಗಿದೆ.

        "ತೆನೆ ತೆನೆ ಕುಡಿದರೆ ರಾಸಿ, ಹನಿ ಹನಿ ಕುಡಿದರೆ ಹಳ್ಳ " ಎಂಬ ಗದೆಯ ವಾಣಿಯಂತೆ ಭಾರತ ಹಿರಿದಾದ ಸಂಸ್ಕ್ರತಿಗೆ ಈ ದೇಶದ ಸಮಸ್ತ ಜನರ ಬದುಕು, ಬದುಕಿನ ರಿತಿ, ಸೃಜನತೆಗಳೇ ಈ ಸಂಸ್ಕ್ರತಿಗೆ ಕಾರಣವಾಗಿದೆ. 
      
       ಬೆಳಗಾಂಮ ಎಂಬ ಜಿಲ್ಲೆಯ ನೇಸರ್ಗಿ ಎಂಬ ಒಂದು ಸುಂದರ ಊರಿಂದ ಶುರುವಾಯಿತು ಈ ನನ್ನ ಜೀವನ. ಅಲ್ಲಿಂದ ಶುರುವಾದ ಈ ನನ್ನ ಜೀವನ ಮಣಿಪಾಲ ಎಂಬ ಕಣ್ಣು ಕುಕ್ಕುವ, ಬಲು ಜನನಿಭಿಢ ಸ್ಥಳಕ್ಕೆ ಇಂದು ಬಂದು ನಿಂತಿದೆ. ಏಕೆ ನಿಂತಿದೆ, ಹೇಗೆ ನಿಂತಿದೆ ಎಂಬುದು ನನ್ನ ಮನಸ್ಸಿನಲ್ಲಿರುವ ವಸ್ತು ವಿಷಯ. ಎಲ್ಲರಂತೆಯೇ ನಾನು  ತಂದೆ-ತಾಯಿಯೊಡನೆ ಜೊತೆಗೂಡಲಿಲ್ಲ , ಅಣ್ಣನೊಂದಿಗೆ ಆಟವಾಡುತ್ತಾಲಿಲ್ಲಾ, ಜಗಳವಾಡುತ್ತಾ ಬೆಳದ ನಾನು ಬಾಗಲಕೋಟೆ ಜಿಲ್ಲೆಯ ಬಿಳಗಿ  ತಾಲೂಕಿನ ಸಿದ್ದಪುರ್ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಾಲೆಯನ್ನು ಮುಗಿಸಿ, ಕನ್ನಡ ಮಾಧ್ಯಮದಲ್ಲಿ ಹೈ-ಸ್ಕೂಲ್ ಮುಗಿಸಿ, ಮುಂದಿನ ವ್ಯಾಸಂಗಕ್ಕಾಗಿ, ನೇಸರ್ಗಿಗೆ ಬಂದೆ  ಕಂಪ್ಯೂಟರ್ ಶಿಕ್ಷಣವನ್ನು ಪಡೆದು, ಚಿಪ್ ಡಿಸೈನ್ ಮಾಡುತ್ತಾ,  ಸಾಫ್ಟ್ ವೇರ್ ಇಂಜಿನಿಯರ್ ಆಗಿ ಒಂದು ಸಾಫ್ಟ್ ವೇರ್ ಸಂಸ್ಥೆಯಲ್ಲು ಕೆಲಸ ಮಾಡುತ್ತಿದ್ದೇನೆ. ವಿದ್ಯಾಭ್ಯಾಸ ಮುಗಿಸುತ್ತಾ, ಕೆಲಸ ಮಾಡುತ್ತಾ  ಜವಾಬ್ದಾರಿ ಏನೆಂಬುದನ್ನು ಅರಿತೆ,  ಕೇವಲ ನನ್ನ ಜೀವನ ವಸತಿಯಲ್ಲೇ ಬೆಳೆಯುತ್ತಾನೆ ಸಾಗಿತು ನನ್ನ ಜೀವನ. ಮಧ್ಯದಲ್ಲಿ ಎಷ್ಟೋ ಭಾವನೆಗಳ ಸಂಘರ್ಷದೊಂದಿಗೆ ಬದುಕು ಎಂದರೇನು, ಸ್ನೇಹ ಹಾಗೂ ಪ್ರೀತಿ ಎಂದರೇನು ಎಂಬುದನ್ನು ಅರಿಯುತ್ತಾ ಬೆಳೆದೆ. ಬುದ್ದಿಯು ಬಲಿಯುತ್ತಾ, ಕಾಲವು ಕಳೆಯುತ್ತಾ ಜೀವನ ಎಂದರೇನು ಎಂಬ ವಿಷಯವು ಪ್ರಶ್ನೆಯಾಗತೊಡಗಿದೆ.
      ಜೀವನ ಎಂದರೇನು? ತುಂಬಾ ದಿವಸದಿಂದ ಈ ಪ್ರಶ್ನೆಯು ನನ್ನ ತಲೆಯಲ್ಲಿ ಸರಿದಾಡುತ್ತಿದೆ. ಈ ಪ್ರಶ್ನೆಯು ಆಳವಾಗಿ ಮನಸ್ಸನ್ನು ಹೊಕ್ಕಲು ಅದರ ಬೇರು ದೇಹವನ್ನೆಲ್ಲಾ ಆಕ್ರಮಿಸತೊಡಗಿದೆಯೇನೋ ಎಂಬ ಭಾವ ನನ್ನಲ್ಲಿ ಮೂಡುತಿದೆ.ಈ ಭಾವದ ಜೊತೆಗೆ ಹಲವಾರು ಪ್ರಶ್ನೆಗಳು ಸಹ ನನ್ನ ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತಿದೆ. ಈ ಜೀವನ ಎಂದರೇನು? ಎಂಬ ಪ್ರಶ್ನೆಗೆ ಹಲವಾರು ಪ್ರಶ್ನೆಗಳು ಉತ್ತರವಾಗಿ ಕಾಣುತ್ತಿದೆ. ಎಷ್ಟೇ ಉತ್ತರ ನೀಡಿದರು ಸಂಪೂರ್ಣ ಉತ್ತರ ಸಿಗಲಿಲ್ಲವೆಂಬ ಭಾವ. ಈ ಪ್ರಶ್ನೆ ಹಾಗೂ ಉತ್ತರಗಳ ಕಲಹದಲ್ಲ ನನಗನ್ನಿಸಿದ ಎಷ್ಟೋ ವಿಷಯಗಳನ್ನು ಬರೆಯಬೇಕಾಗಿ ಎಷ್ಟೋ ಸಲ ಅನ್ನಿಸಿದ್ದರೂ ಅದಕ್ಕೆ ಒಂದು ಸ್ಪಷ್ಟ ಚಿತ್ರ ನೀಡಲು ಸಾಧ್ಯವಾಗಿರಲಿಲ್ಲ. ಆ ವಿಷಯಗಳಿಗೆ ಒಂದು ಚಿತ್ರವನ್ನು ನೀಡುವ ಪ್ರಯತ್ನವೇ ಈ ಬರವಣಿಗೆ.
      ಹುಟ್ಟಿದ ಕೆಲವು ದಿನಗಳಿಗೆ ಮಾತು ಬರದೆ ಹೇಳಲು ಆಗದೆ ತನಗೆ ಏನು ಬೇಕೆಂಬುದನ್ನು ಸಂಘ್ನೆಯಲ್ಲಿ ಅಮ್ಮನಿಗೆ ಮಾಡಿತೋರಿಸಿ ಪಡೆಯುವುದರಲ್ಲಿದೆಯಾ ಜೀವನ? ಅಂಬೆಗಾಲಿನಿಂದ ಹಿಡಿದು ನಡೆದು, ಓಡುವುದರಲ್ಲಿದಯಾ ಜೀವನ? ಮಾತು ಕಲಿತು ಅಮ್ಮನೊಂದಿಗೆ ಮೊದಲು ಪ್ರೀತಿಯಿಂದ ನಂತರ ಗದರುಮಾತಿನಲ್ಲಿದಯಾ ಜೀವನ? ಜೀವನದುದ್ದಕ್ಕೂ ಎದುರಾಗುವ ಪರೀಕ್ಷೆಗಳಲ್ಲಿ ಸೋಲುವುದು ಅಥವಾ ಗೆಲ್ಲುವುದರಲ್ಲಿದೆಯಾ ಜೀವನ? ಸ್ನೇಹದಲ್ಲಿ ಮುಳುಗಿ ಅದರ ನೋವು ಸುಖಗಳನ್ನು ಅನುಭವಿಸಿ, ಪ್ರೀತಿಯ ಬಿಸಿಲು ಕುದುರೆಯನ್ನು ಏರಿ ಅದು ಕರೆದೊಯ್ಯುವ ಕಡೆ ಹೋಗುವುದಾ ಜೀವನ? ಇಲ್ಲಿಯವರೆಗೂ ಅನುಭವಿಸಿದ ಕಷ್ಟ ನೋವುಗಳ ಸರಪಣಿಗಳೂ ಸಾಕು ಎಂದು ವೃತ್ತಿಪರ ಶಿಕ್ಷಣದಲ್ಲಿ ತೊಡಗಿ, ಕೆಲಸಕ್ಕೆ ಸೇರಿದ ಒಂದೆರಡು ತಿಂಗಳುಗಳಲ್ಲಿ ಅದರ ರುಚಿ ಒಗರೆಂದು ತಿಳಿದು, ಮೊದಲು ಕೆಲವು ಸಂಬಳದ ಹಣವನ್ನು ಮನಸ್ಸು ಬಂದಂತೆ ಖರ್ಚು ಮಾಡಿ, ತಂದೆ-ತಾಯಿಗೆ, ಅಣ್ಣನಿಗೆ, ಸ್ನೇಹಿತರಿಗೆ ಉಡುಗೊರೆಗಳನ್ನು ಕೊಡುವುದಾ ಜೀವನಾ? ಸಮಯ ಕಳೆದಂತೆ ವೃತ್ತಿಯೂ ಸಹ ಒಂದು ದಿನಚರಿಯಾಗಿ, ದೈನಂದಿನ ಕೆಲಸಗಳನ್ನು ಮಾಡುವಂತೆ, ವೃತ್ತಿಯನ್ನೂ ಸಹ ಒಂದು ಯಂತ್ರದಂತೆ ನಿರ್ವಹಿಸುವುದು ಜೀವನಯಾ?? ಯಾವುದು ಜೀವನ??
       ಜೀವನವೆಂಬುದು ಆಸಕ್ತಿಯಾ??? ಗೊತ್ತಿಲ್ಲ!!! ಹೀಗಿದ್ದಲ್ಲಿ ಯಾವುದರಲ್ಲೂ ಆಸಕ್ತಿಯಿಲ್ಲದಿದ್ದರೆ ಜೀವನೆವೇ ಮುಗಿದುಹೋಯಿತಾ? ಯಾವುದಾದರೊಂದು ವಿಷಯದ ಬಗೆಗಾಗಲಿ. ಕೆಲಸದ ಬಗೆಗಾಗಲಿ ಆಸಕ್ತಿಯು ಏರಿಳಿತವಿಲ್ಲದೆ ಸಮವಾಗಿರುವುದು ಸಾಧ್ಯವೇ? ಹಳೆಯ ಕಹಿ ಘಟನೆಗಳನ್ನು ಮರೆಯುತ್ತಾ, ಸ್ನೇಹಿತರೊಂದಿಗೆ ಜೊತೆಗೂಡಿ ಕಳೆದ ಸಮಯವನ್ನು ನೆನೆಯುತ್ತಾ ಇಂದಿನ ಸ್ಥಿತಿಯನ್ನು ಶಪಿಸುತ್ತಾ, ಭವಿಷ್ಯತ್ತನ್ನು ಕಾಯುವುದು ಜೀವನವಾ? ಯಾವುದು ಜೀವನ?? ಹೀಗೆ ಹಲವಾರು ಪ್ರಶ್ನೆಗಳು. ಈ ಜೀವನದ ಬಗೆಗಿನ ಚರ್ಚೆಯಲ್ಲಿ ನನ್ನ ಮನಸ್ಸಿನ ಅಂಗಳದಲ್ಲಿ ಒಗಟುಗಳು ಅಲೆ ಅಲೆಯಾಗಿ ಒಗಟುಗಳು ಮೂಡುತ್ತಿವೆ. ದುಃಖಗೊಂಡಾಗ ಅಲೆಗಳು ಮನಸ್ಸನ್ನು ಪದೇ-ಪದೇ ಅಪ್ಪ್ಳಿಸುತ್ತಾ ಘಾಸಿಗೊಳಿಸುತ್ತಾ, ಸಂತೋಷವಾದಾಗ ಒಂದು ಉಲ್ಲಾಸದ ಭಾವನೆಯು ಮನಸ್ಸನ್ನು ತುಂಬಿಕೊಳ್ಳೂತ್ತದೆ. ಹೀಗೆ ನನ್ನ ಮನಸ್ಸಿನಲ್ಲಿ ಜೀವನದ ಬಗೆಗಿನ ಸತ್ಯಾನ್ವೇಷಣೆ ಶುರುವಾಗಿದೆ. ಈ ಅನ್ವೇಷಣೆಯು ಯಾವ ಮಟ್ಟಕ್ಕೇರಿ ಯಾವ ದಿಕ್ಕು ಹಿಡಿದು ಎಲ್ಲಿಗೆ ಮುಟ್ಟುತ್ತದೋ ನಾ ಕಾಣೆ. ಅಲ್ಲಿಯವರೆಗೆ ಜೀವನದ ಪಯಣದಲ್ಲಿ ನನ್ನ ಪಯಣ ಸಾಗುತ್ತಿರುತ್ತದೆ….. 
      ಭಾರತದಲ್ಲಿ ಈಗ ೨೮ ರಾಜ್ಯಗಳಿವೆ ಈ ರಾಜ್ಯದಲ್ಲಿ ಕರ್ನಾಟಕ ಕೂಡಾ ಒಂದು ಈ ಕರ್ನಾಟಕ ರಾಜ್ಯದಲ್ಲಿ ೨೭ ಜಿಲ್ಲೆಗಳಿವೆ, ಈಗ ಅಂದರೆ ಅಗಷ್ಟ ತಿಂಗಳಿನಲ್ಲಿ ೨೦೦೭ರಲ್ಲಿ ಎರಡು ಜಿಲ್ಲೆಗಳು ಹೊಸದಾಗಿ ಬಂದಿವೆ, ಅವುಗಳೆಂದರೆ ಚಿಕ್ಕ ಬಲಾಪುರ, ಹಾಗೂ ರಾಮನಗರ, ಈ ೨೭ ಜಿಲ್ಲೆಗಳಲ್ಲಿ ಕರ್ನಾಟಕವನ್ನು, ಉತ್ತರ ಕರ್ನಾಟಕ, ಹಾಗೂ ದಷ್ಕಿನ್ ಕರ್ನಾಟಕ. ಎಂದು ಎರಡು ಪ್ರಕಾರಗಳನ್ನು ಮಾಡಿದ್ದರೆ. ಆ ೨೭ ಜಿಲ್ಲೆಗಳಲ್ಲಿ ಬಾಗಲಕೋಟೆ ಎಂಬ ಜಿಲ್ಲೆ ಕೂಡಾ, ಬಾಗಲಕೋಟೆಯನ್ನು ಕೋಟೆಗಳ ಬಾಗಿಲು ಎಂದು ಕರೆಯಬಹುದು. ಏಕೆಂದರೆ ಈ ಜಿಲ್ಲೆಯಲ್ಲಿ ೬ ತಾಲೂಕುಗಳಿವೆ,

     ಬಾಗಲಕೋಟಯು ಕರ್ನಾಟಕದ ಒಂದು ಜಿಲ್ಲಾ ಕೇಂದ್ರ. ಈ ಜಿಲ್ಲೆಯು ಉತ್ತರ ಕರ್ನಾಟಕದಲ್ಲಿ ಸ್ಥಾಪಿತವಾಗಿದೆ. ಮತ್ತು ಬೆಳಗಾವಿಗದಗಕೊಪ್ಪಳರಾಯಚೂರು ಹಾಗೂ ಬಿಜಾಪುರಗಳೊಂದಿಗೆ ತನ್ನ ಗಡಿಯನ್ನು ಹೊಂದಿದೆ. ೧೯೯೭ರಲ್ಲಿ ಭಾರತದ ೫೦ನೆಯ ಸ್ವಾತಂತ್ರ್ಯೋತ್ಸವದ ಸ್ಮರಣೀಯ ಘಟ್ಟದಲ್ಲಿ ಕರ್ನಾಟಕ ಸರ್ಕಾರದ ಪ್ರಕಟಣೆ ಆರ್‌ಡಿ ೪೨ ಎಲ್ಆರ್‌ಡಿ ೮೭ ಭಾಗ ೩ ನಿರ್ದೇಶದ ದ್ವಾರಾ ಹೊಸ ಜಿಲ್ಲೆಯಾಗಿ ಅಂದಿನ ಮುಖ್ಯಮಂತ್ರಿ ಮಾನ್ಯ ಜೆ.ಎಚ್.ಪಟೇಲರಿಂದ ಉದ್ಘಾಟಿಸಲ್ಪಟ್ಟಿತು. ಐತಿಹಾಸಿಕವಾಗಿ ಬಾಗಲಕೋಟ ಜಿಲ್ಲೆಯು ಚಾಲುಕ್ಯರಾಳಿದ ನಾಡು. ಬಾದಾಮಿಐಹೊಳೆಪಟ್ಟದಕಲ್ಲುಕೂಡಲಸಂಗಮ ಮತ್ತು ಮಹಾಕೂಟ ಇಲ್ಲಿಯ ಅತ್ಯಂತ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು
     ಮೂಲ ಹೆಸರು ಬಾಗಡಿಗೆ ಎಂದು ಆಗಿತ್ತು. ಪುರಾಣಗಳ ಪ್ರಕಾರ ಲಂಕಾಧಿಪತಿಯಾದ ರಾವಣ ಈ ಪ್ರದೇಶವನ್ನು ಆಳುತ್ತಿದ್ದ, ಅವನು ಈ ನಗರವನ್ನು ಬಜಂತ್ರಿ (ಸಂಗೀತಗಾರರು) ಗೆ ಕೊಡುಗೆಯಾಗಿ ನೀಡಿದ್ದನು. ಬಿಜಾಪುರ ರಾಜರು ತನ್ನ ಮಗಳಿಗೆ ಕಂಕಣ ಕಾಣಿಕೆ (ಮಗಳ ಮದುವೆ ನಂತರ ಬಳೆ, ಸೀರೆ, ಆಭರಣಗಳ ಖರೀದಿಸಲು ತಂದೆ-ತಾಯಿ ಹಣ ಕೋಡುವ ಸಂಪ್ರದಾಯದಂತೆ) ಯಾಗಿ ಈ ಪಟ್ಟಣವನ್ನು ಕೊಡುಗೆಯಾಗಿ ನೀಡಿದನು ಎಂದು ಹೇಳಲಾಗುತ್ತದೆ. ಪರಿಣಾಮವಾಗಿ ಪಟ್ಟಣದ ಹೆಸರು "ಬಾಗಡಿಕೋಟೆ"ಯಾಗಿ ನಂತರ ಬಾಗಲಕೋಟೆಯಾಗಿ ಮಾರ್ಪಟ್ಟಿತು. ನಂತರದ ದಿನಗಳಲ್ಲಿ ಬಾಗಲಕೋಟೆ ವಿಜಯನಗರ ದೊರೆಗಳ, ಪೇಶ್ವೆಗಳ, ಮೈಸೂರಿನ ಹೈದರಾಲಿ, ಮರಾಠ ಆಡಳಿತಗಾರರು ಮತ್ತು ಅಂತಿಮವಾಗಿ 1818 ರಲ್ಲಿ ಬ್ರಿಟಿಷ್ ಆಳ್ವೆಕೆಗೆ ಒಳಗಾಯಿತು. 1865 ರಲ್ಲಿ ಪುರಸಭೆಯಾಗಿ ಅಸ್ಥಿತ್ವಕ್ಕೆ ಬಂದಿತು. ಬಾಗಲಕೋಟೆಯು "ಸ್ವಾತಂತ್ರ್ಯ ಚಳುವಳಿ" ಮತ್ತು "ಕರ್ನಾಟಕ ಏಕೀಕರಣ ಚಳುವಳಿ"ಗಳಿಗೆ ಕೇಂದ್ರವಾಗಿತ್ತು.
ಇಂದು, ಬಾಗಲಕೋಟೆ ಪಟ್ಟಣ ಎರಡು ಭಾಗಗಳಲ್ಲಿ ಹಂಚಿ ಹೋಗಿದೆ, ಹೊಸ ಬಾಗಲಕೋಟೆ ಅಥವಾ ನವನಗರ ಮತ್ತು ಹಳೆಯ ಬಾಗಲಕೋಟೆ ಪಟ್ಟಣ. ಆಲಮಟ್ಟಿ ಅಣೆಕಟ್ಟಿನ ನಿರ್ಮಾಣದಿಂದಾಗಿ ಹಳೆಯ ಪಟ್ಟಣದ ಬಹುತೇಕ ಭಾಗಗಳು ಮುಳುಗಡೆ ಹೋದಿದೆ. ಆ ಕಾರಣದಿಂದ ಹೊಸ ನವನಗರ ನಿರ್ಮಾಣ ಅನಿವಾರ್ಯವಾಯಿತು. ನವನಗರವು ವಿಶಾಲ ರಸ್ತೆಗಳು, ಉದ್ಯಾನಗಳು, ಮತ್ತು ಇತರ ಆಧಿನಿಕ ಸೌಲಭ್ಯಗಳನ್ನು ಹೊಂದಿದ ಕಟ್ಟಿದ ಪಟ್ಟಣವಾಗಿದೆ.
ನದಿಗಳು
ಇಲ್ಲಿ ಘಟಪ್ರಭಾ, ಮಲಪ್ರಭಾ, ಮತ್ತು ಕೃಷ್ಣಾ ನದಿಗಳು ಹರಿಯುತ್ತವೆ.
ಕೃಷ್ಣಾ ನದಿ
ಕೃಷ್ಣಾ ನದಿ ದಕ್ಷಿಣ ಭಾರತದ ಎರಡನೆಯ ದೊಡ್ಡ ನದಿಯಾಗಿದೆ. ಈ ನದಿ ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಮಹಾದೇವ ಪರ್ವತ ಶ್ರೇಣಿಯಲ್ಲಿ ಮಹಾಬಲೇಶ್ವರ‍ದ ಹತ್ತಿರ ಸಮುದ್ರ ಮಟ್ಟಕ್ಕಿಂತ ೧೩೩೮ ಮೀಟರ ಎತ್ತರದಲ್ಲಿ ಉಗಮವಾಗಿ ಸುಮಾರು ೧೩೯೨ ಕಿ.ಮಿ.ಗಳಷ್ಟು ಹರಿದು ಆಂಧ್ರಪ್ರದೇಶ‍ದ ಹಂಸಲಾದೀವಿಯಲ್ಲಿ ಬಂಗಾಳ ಕೊಲ್ಲಿ ‍ ಯನ್ನು ಸೇರುತ್ತದೆ. ಕೃಷ್ಣಾ ನದಿ ಮಹಾರಾಷ್ಟ್ರ,ಕರ್ನಾಟಕ, ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಪ್ರವಹಿಸುತ್ತದೆ. ಕರ್ನಾಟಕ ರಾಜ್ಯದಲ್ಲಿ ಇದು ಸುಮಾರು ೪೮೩ ಕಿ.ಮಿ.ಹರಿಯುತ್ತದೆ.ಇದರ ಮುಖ್ಯವಾದ ಉಪನದಿಗಳೆಂದರೆ ತುಂಗಭದ್ರಾ , ಕೊಯ್ನಾ, ಭೀಮಾ , ಮಲಪ್ರಭಾ ,ಮತ್ತು ಘಟಪ್ರಭಾ
     ೧೯೬೨ರಲ್ಲಿ ಭಾರತ‍ದ ಪ್ರಧಾನ ಮಂತ್ರಿ‍ಯಾದ ಶ್ರೀ ಲಾಲ ಬಹಾದ್ದೂರ ಶಾಸ್ತ್ರಿ‍ಯವರು ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಡಿಗಲ್ಲನ್ನಿಟ್ಟರು. ಈ ಯೋಜನೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಆಲಮಟ್ಟಿ ಜಲಾಶಯ ಹಾಗು ಅದರ ಕೆಳಗೆ ಸುಮಾರು ೭೦ ಕಿ.ಮಿ. ದೂರದಲ್ಲಿ ಕೃಷ್ಣಾ ಹಾಗು ಮಲಪ್ರಭಾಗಳ ಸಂಗಮದ ಕೆಳಭಾಗದಲ್ಲಿ ನಾರಾಯಣಪುರ ಜಲಾಶಯಗಳಿವೆ. ೧೯೯೪ರಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ರಚನೆಯಾಯಿತು.
ತಾಲೂಕುಗಳು
೧. ಬಾಗಲಕೋಟೆ 
೨. ಬದಾಮಿ
೩. ಹುನಗುಂದ 
೪. ಜಮಖಂಡಿ 
೫. ಮುದೋಳ 
೬. ಬಿಳಗಿ 

      ನನಗೆ ನೆನಪಾಗುವದು  ಬದಾಮಿ, ಐಹೊಳೆ, ಹಾಗೂ ಪಟ್ಟದಕಲ್ಲು, ಇಲ್ಲಿ ಅನೇಕ ರಾಜರುಗಳು ಜನಿಸಿದ ಭೂಮಿ ಇದು, ಅವರು ನೆನಪಿಗಾಗಿ ಅವರು ಕತ್ತಿರುವಂತಹ ಬಸದಿಗಳು, ಕೋಟೆ ಅತಿ ಪ್ರಾಚಿನ ಕಾಲದ ಭವ್ಯ ಬಂಗಲೆಗಳು,  ಬಾದಾಮಿಯ ಬನಶಂಕರಿಯ ದೇವಸ್ತಾನ, ಎಲ್ಲವು ಕಂಗೊಲಿಸುತವೆ, ಅಷ್ಟೇ ಅಲ್ಲದೆ ರನ್ನ ಕವಿ ಜನಸಿದ ಮುದೋಳ ತಾಲೂಕು ಸಹ ತುಂಬ ಚನ್ನಾಗಿದೆ, ಕವಿಯ ನೆನಪಿಗಾಗಿ ಮುದೋಳಿನಲ್ಲಿ ರನ್ನ ಕ್ರಿಡಾನ್ಗನವನ್ನು  ಕಟ್ಟಿದ್ದಾರೆ. ಎಲ್ಲಿ ಅರಮನೆಗಳಿವೆ, ಜಮಖಂಡಿಯಲ್ಲಿಯು ಸಹ ಅರಮನೆಗಳಿವೆ, ಎಲ್ಲಿ ಸುಮಾರಾಗಿ ಮುಸ್ಲಿಮರು ಜಾಸ್ತಿ ಏರುತಾರೆ, ತುಂಬಾ  ಒಳ್ಳೆಯವರು,
             ಇಲ್ಲೀ ಹಳೆಯಕಾಲದ ದುಡಿ ಗೊಪುರಗಳಿವೆ, ಹಾಗು ಇಲ್ಲಿ  ಪ್ರಸೀದ್ದ ಸೀದ್ದೆಶ್ವ್ರರ್ ದೆವಸ್ತಾನವೀದೆ, ಪ್ರತಿ ವರ್ಷ್ ಶ್ರವಣದ ಕೊನೆಯ ಸೊಮವಾರ ಜಾತ್ರೆ ನಡೆಯುತ್ತದೆ, ಅ೦ಲ್ಲಿ೦ದ ಸ್ವಲ್ಪು ದುರಾ ಹೊದರೆ ನಾಗರಾಳ  ಬರುತ್ತದೆ, ಇಲ್ಲಿ ಸಿ೦ದುರ ಲಕ್ಷ್ಮಮನ ಆಳಿದ ಊರು, ಇ ಸ್ಥಳದಲ್ಲಿ ಆಗಿನ ಕಾಲದ ಬ್ರಿಟೀಷರು ಇದ್ದರು, ಇಲ್ಲಿ ಕಾಡುಗಳಿವೆ, ಹಾಗೂ ಪ್ರಾಛ್ಹಿನ  ಕಾಲದಲ್ಲಿ ಹುಲಿ, ಛಿರತೆಗಲು, ಸಿ೦ಹಗಳು ಇದ್ದವು, ಇಲ್ಲಿ ಪಡಿಯಮ್ಮನ ದೆವಸ್ತಾನವಿದೆ, ಹಾಗೂ ದಿಗ೦ಬರೆಶ್ವರ ದೆವಸ್ತಾನವಿದೆ, ಬಲು ಚನ್ನಾಗಿದೆ, ಬಿಳಗಿ  ತಾಲುಕೂ  ಸುಮಾರಾಗಿ ೪೦ ರಿ೦ದ ೪೫ ರವರೆಗೆ  ಹಳ್ಳಿಗಳಿವೆ, ಆ ಹಳ್ಳಿಗಳಲ್ಲಿ, ಗುಡದಿನ್ನಿ ಕೂಡಾ ಒ೦ದು, ಅದು ನನ್ನೂರು, ಇದು ಬಿಳಗಿಯಿ೦ದಾ ಸುಮಾರಾಗಿ ೨೩ ಕಿ, ಮೀ, ಇದೆ, ಇಲ್ಲಿ ಬಸ್ಸಿನ ಸೌಕರ್ಯ ಕಡಿಮೆ, ಇಲ್ಲಿ ಜನರು ಸಹಾ ಕಡಿಮೆ ೫೦ ರಿ೦ದಾ ೭೦ ಮನೆಗಳು ಮಾತ್ರಾ, ಸ್ವಲ್ಪಾ ದುರದಲ್ಲಿ ಅ೦ದರೆ ೧ ಕಿ,ಮೀ, ನಲ್ಲಿ ಕ್ರೈಷ್ನಾ ನದಿ ಇದೆ, ಇದು ಬಹಳ ವಿಶಾಲವಾಗಿದೆ, ಇಲ್ಲಿ ಹೆಚ್ಚಾಗಿ ಬೆಳೆಯುವದು ಕಬ್ಬು, ಹತ್ತಿ, ಶೆ೦ಗಾ, ತರಕಾರಿ, ತೆ೦ಗಿನಕಾಯಿ, ಬಾಳಿ, ದ್ರಾಶ್ಕಿ, ತು೦ಬಾ ಚನ್ನಾಗಿದೆ, 
        
    

               
ಡಾ.ಶ್ರೀ.ಶ್ರೀ. ಮಹಂತ
 
ಬಾಪುರೈ 
ಚನ್ನಮ್ಮ
ರಂಗೋಲಿ 

ಕಾರ್ಮಿಕ್ ಫ್ಯಾಮಿಲಿ 
ಮಾಲ್ಲಪುರ್ 
ಮಣಿಪಾಲ































































ಮನಸ್ಸು ನಿನ್ನದು ಕನಸು ನನ್ನದು
       
"ಮಾತೆಂಬ ಸರಪಳಿಯಿಂದ ನಮ್ಮಿಬ್ಬರ ಸ್ನೇಹವಾಯಿತು, ಸ್ನೇಹವೆಂಬ ಸರಪಳಿಯಿಂದ ನಮ್ಮಿಬ್ಬರ ಪ್ರಿತಿಯಾಯಿತು, ಪ್ರಿತಿಯಂಭ ಸರಪಳಿಯಿಂದ ನಮ್ಮಿಬ್ಬರ ಹೃದಯ ಒಂದಾಯಿತು,
      "ಶಾರೀರಿಕವಾಗಿ ಬದುಕಿರಲು ಶುದ್ದವಾದ ಗಾಳಿ, ನೀರು,ಆಹಾರ, ಹಾಗೂ ವಿಶ್ರಾಂತಿ, ಎಷ್ಟು  ಅಗತ್ಯವೋ, ಅದೇ ರೀತಿಯಲ್ಲಿ ಮಾನಸಿಕವಾಗಿ, ಆರೋಗ್ಯಕ್ಕೆ, ಶುದ್ದವಾದ ಪ್ರೀತಿಯು ಅಗತ್ಯ,ಪ್ರೀತಿಯು ಇಲ್ಲದ ಮಾನವ  ಸಂಸ್ಕ್ರತಿ ಭಾಷೆ ಕಾಲರಹಿತ ಸಂಸ್ಕ್ರತಿಯಗಿರುತದೆ, ಪ್ರೀತಿಯು ನಮ್ಮ ಬದುಕನ್ನು ಸುಂದರಗೊಳಿಸುತದೆ, ಏಕೆಂದರೆ ಪ್ರೀತಿಯು ಅನುಭವ ಸುಂದರವಾಗಿಯೂ ಪ್ರೀತಿ ಪ್ರಕೃತಿಯ ಸಹಜವಾಗಿ ಒಲ್ಹೆಯತನದ ಇನ್ನೊಂದು ಮುಖವಗಿರುತಗೆ, ಆದುದರಿಂದ ನಿಜವಾದ ಪ್ರೀತಿ ನಮ್ಮ ಜೀವನವನ್ನು ವಿಕಾಸಗೊಳಿಸುತ್ತದೆ. ಪ್ರೀತಿಯು ಅನುಬವ ಬಯರಹಿತ ಶಕ್ತಿಯಗಿರುತದೆ, ಎಲ್ಲಿ ಬಯವಿರುದೆ ಅಲ್ಲಿ ಪ್ರೀತಿ ಅಸ್ಥಿತ್ವವಿರುತದೆ,
      ಹಣವೆಂಬ ಎರಡಕ್ಷರದಿಂದಾ ಒಂದು ಅಮೂಲ್ಯವಾದ ವಸ್ತುವನ್ನು ಕೊಂಡಿಕೊಲ್ಲಬಹುದು, ಆದರೆ ಪ್ರೀತಿ ಎಂಬ ಎರಡಕ್ಷರದಿ೦ದ ಇಡಿ ಜಗತನ್ನೇ ಗೆಲ್ಲಬಹುದು, ಪ್ರೀತಿಯು ಆಕರ್ಷೆನ್ನೇ ಮನುಷ್ಯನಿಗೆ ಉಸಿರಾಟದ ನಾಳಗಳಿದಂತೆ, ಪ್ರೇಮಿಗಳು ಹತ್ತಿರವಾಗಲು ಪ್ರಯತ್ನಿಸುತ್ತಾರೆ, ಹತ್ತಿರವಾದರು ಒಂದಾಗಬೇಕೆಂದುಕೊಳ್ಳುತ್ತಾರೆ, ಒಂದಾದ ನಂತರ ಪ್ರಿತಿಯಿಂದಾ ಆಲಂಗಿಸಿಕೊಲ್ಲಬೇಕೆನ್ನುತ್ತಾರೆ, ನಂತರ ಅವರು ಒಂದೇ ನಾಣ್ಯದ ಎರಡು ಮುಖಗಳನ್ತಾಗುತ್ತಾರೆ, ಯಾವ ಮುಕವು ಸರಿಯಾಗಿ ಕನುವದಿಲ್ಲವೋ ಆ ಮುಖಕ್ಕೆ , ಅಥವಾ ಆ ನಾಣ್ಯಕ್ಕೆ ಬೆಲೆ ಇರುವದಿಲ್ಲಾ.
        ಬದುಕಿಗೂ ಪ್ರೀತಿಗೂ ಬಿಡಿಸಲಾಗದ ನ೦ಟು ಇದೆ ಪ್ರೀತಿ, ಪ್ರೇಮ, ನೆರಲಿನಂತ್ತದ್ದು, ಹಿಂದೆ ಬಿದ್ದರೆ ಓಡುತ್ತದೆ. ಓಡಿದರೆ ಹಿಂದೆ ಬೀಳುತ್ತದೆ. ಹಾಗಾಗಿಯೇ ಪ್ರೀತಿಯ ಕಥೆಗಳು ವಿಚಿತ್ರವಗಿರುತವೆ.
ಪ್ರೀತಿಯ ಅರ್ಥ.......      
     " ಪ್ರೀತಿಸುವದು ತಪ್ಪಲ್ಲಾ......... ಆದರೆ ಪ್ರೀತಿಗೆ ಸಿಲುಕಿ ಭವಿಷ್ಯವನ್ನು ನಿರ್ಲಷ್ಕಿಸಬಾರದು".
     " ಪ್ರೀತಿ ಎಂಬುದು ಮಾನಿಯಾ.... ಪ್ರೀತಿಗೆ ಸಿಲುಕಿದರೆ ಮನಶಾಂತಿಯು ಬದಲಾಗುತ್ತದೆ "
     " ಪ್ರೀತಿ ಎಂದರೆ ನವಿಲಾರದ ಭಾವನೆ ಎಂದರ್ಥ... ಅಂದರೆ ಒರಟಾಗಿ ವರ್ತಿಸದೆ ನಯ ವಿನಯದಿ೦ದಾ ಇರುವದು"
     " ಪ್ರೀತಿ ಎನ್ನುವದು ನಿರಿದ್ದಂತೆ, ನೀವು ಅದನ್ನು ಯಾವ ಪಾತ್ರೆಗೆ ಹಾಕುತ್ತಿರೋ ಆ ಪಾತ್ರೆಯ ಆಕಾರಕ್ಕೆ ಅದು ಹೊಂದಿಕೊಳುತ್ತದೆ"
     " ದಿ ವರ್ಲ್ಡ ಆಪ್ ಲವರ್ಸ ವಿಷದೆಮ್ ಆಲ್ ದಿ ಬೆಸ್ಟ "
     " ಲವ್ ಇಸ್ ಆನ್ ಓಶನ್ ಆಫ್ ಎಮೊಷನ್ಸ "
     " ಲವ್ ಕೇಳಿಯೇ ಸಾಲ ಕುಚ್ ಬಿ ಕರೇಗಾ "
    " ಪ್ರೇಮ ಎನ್ನುವದು ಇಲ್ಲ ಮಾನವನ ಸಹಜ ಆಸೆ, ಅದಕ್ಕೆ ಅದರದೇಯಾದ ಶಕ್ತಿ, ಎದೆ ದು:ಖದಲ್ಲಿ ಇರುವವರೆಗೂ ಪರಿಯಾರ ನಿಡುವ ಗುಣ ಪ್ರಿತಿಯಲ್ಲಿದೆ,
     "  ನಿಜವಾದ ಪ್ರೀತಿ ಎಂದರೆ ಇಬ್ಬರೂ ಅಂದರೆ ಒಂದು ಗಂಡು, ಇನ್ನೊಂದು ಹೆಣ್ಣು , ಮಾನಸಿಕವಾಗಿ ದೈಹಿಕವಾಗಿ ಒಬ್ಬರಿಗೊಬ್ಬರು ಒಂದಾಗಬೇಕೆಂದು ಬಯಸುವದೇ ನಿಜವಾದ ಪ್ರೀತಿ" ಅಥವಾ "ಎರಡು ಪವಿತ್ರ ಹೃದಯಗಳ ಸಂಗಮವೇ ಪ್ರೀತಿ "
             ಪ್ರೀತಿ => ಉರುಯುವ ಬೆಂಕಿ 
                           ಆದರೆ ನಿರಂತರ ಶೀತಲ 
            ಪ್ರೀತಿ => ಗೆಲ್ಲಿವವದರಲ್ಲಿದೆ 
                           ಆದರೆ  ಸೋಲಿನಲ್ಲಿ ಹೆಚ್ಚಾಗಿದೆ 
           ಪ್ರೀತಿ => ನರಲಿಸುತದ್ದೆ 
                         ಆದರೆ ಸಾಹಿಸುವದಿಲ್ಲಾ
           ಪ್ರೀತಿ => ನಿರಂತರ ಸತ್ಯ
                         ಆದರೆ ಸುಳ್ಳುಹೇಳ್ಳುವದರಲ್ಲಿ ಹೆಚ್ಚಾಗಿದೆ,
          ಪ್ರೀತಿ => ಒಲವಿನಲ್ಲಿ ಸಂದೇಹವಿರುತ್ತದೆ 
                        ಆದರೆ ಬೇಸರದಲ್ಲಿ ಹುಚ್ಚು ಹಿಡಿಸುತ್ತದೆ
        
         " ಪ್ರೀತಿ ಒಂದು ಹೂವಿನ ಹಾಸಿಗೆ ಹಾಗೇಯೇ ನೋವಿನ ಹೊದಿಕೆಯು ಕೂಡಾ,ಪ್ರೇಮದ ಸಂಕೇತವಾದ ಗುಲಾಬಿ ಎಲ್ಲಿರುತ್ತದೆ ಅಲ್ಲಿ ಮುಳ್ಳು ಇರಲೇ ಬೇಕು, ಹೀಗೆ ನೋಹು ನಲಿಹುಗಳ ಸಮ್ಮಿ ತವೆ "ಪ್ರೀತಿ"
         " ಪ್ರೀತಿ ಎಂದರೆ  ಚೇತನ ಸ್ಪೂರ್ತಿ, ನಾವು ಯಾವುದೇ ಒಂದು ವಸ್ತುವನ್ನು ಇಷ್ಟ ಪಟ್ಟರೆ ಅದು ನಮ್ಮದಾಗುವದು ಎಂಬ ಬಾವನೆ ಬರುವದು ಸಹಜ, ಅದು ಸಿಗದೇ ಹೋದರೆ, ಬೇರೆ ಯಾರಿಗೂ ಸಿಗಬಾರದು ಎಂಬ ವಿಕೃತ ಭಾವನೆ ಸರಿಯಲ್ಲಾ.ಪ್ರೀತಿ ಪ್ರತಿಯೊಬ್ಬರಿಗೂ ಬಾಳಿಗೂ ಬೆಳಕಾಗಬೇಕು ಹೊರತು ಕತ್ತಲಾಗಬಾರದು.
       
                          " ಜಿತಾ ಹೈ ಜಿಸ್ ಕೆಲಿಯೇ
                           ಜಿಸ್ ಕೆಲಿಯೇ ಮರಾತಾತಾ
                           ಏಕ ಎಸೀ ಲಡಕಿ ತೀ
                           ತುಜೆ ಮೈ ಪ್ಯಾರ ಕರಾತಾತಾ...." 
                           
     


































































































































































































































































ಈ  ಚೆಲುವು  ಮಸಣದ ದಾರಿಯಾ???

propose2
ಮೂಕವಾಗಿದೆ ಮನಸ್ಸು ಇಂದು
ಒಂದು ಮಾತೂ ಮಾತನಾಡದಾಗಿದೆ
ಭಾರವಾಗಿದೆ ಎದೆಯು ಇಂದು
ನನಗೆ ತಿಳಿಯಿತು ಬೆನ್ನಲ್ಲಿ ಚೂರಿ ಇದೆಯೆಂದು
ನೂರೆಂಟು ಭಾವನೆಗಳು ಉಕ್ಕುತಿದೆ
ಆದರೆ ಒಂದಕ್ಕೂ ಮಾತಿನ ಸ್ವರೂಪ ಸಿಕ್ಕುತ್ತಿಲ್ಲ
ಕಣ್ಣುಗಳು ಹರಿಸುತ್ತಿವೆ ನೋವಿನ ಚಿಲುಮೆಯನ್ನು
ಆದರೆ ಅದು ಯಾರ ಕಣ್ಣಿಗೂ ಕಾಣಿಸುತ್ತಿಲ್ಲ
ನಾ ಕಂಡದ್ದು ಸುಂದರ ಹೂವೊಂದು
ನಾ ಅರಿಯದಾದೆ ಅದು ಮುಖವಾಡವೆಂದು
ಬಯಸಿ ಹೋದೆ ನಾ ಹೂವಿನ ಪ್ರೀತಿಯನು
ನಾ ಪಡೆದೆ ಅದರ ಹುನ್ನಾರದ ವಂಚನೆಯನು
ಎಷ್ಟು ದಿನಗಳ ಹುನ್ನಾರವದು ನಾ ತಿಳಿಯೆನು
ವಂಚನೆಯ ಕೂಪಕ್ಕೆ ತಳ್ಳಿ ಸಾವನ್ನು ಕರೆಯುತಿಹುದು
ಹೂವಿನ ಚೆಲುವೇ ಹಿಂಗಾ? ಅಥವಾ ನನ್ನ ಮೌಢ್ಯತೆಯಾ?
ನಂಬಿ ಹಿಂಬಾಲಿಸಿದವರಿಗೆ ಸಿಗುವುದು ಮಸಣದ ದಾರಿಯಾ???

ನಿನ್ನ ನೆನಪುಗಳಲ್ಲಿ………

53845ys3
ನಿನ್ನ ಪ್ರೀತಿಗೆ ಅದರ ರೀತಿಗೆ
ಕಣ್ಣ ಹನಿಗಳೆ ಕಾಣಿಕೆ
ಹೊನ್ನ ಚಂದಿರ ನೀಲಿ ತಾರೆಗೆ
ಹೊಂದಲಾಗದ ಹೋಲಿಕೆ
ನಿನ್ನ ಪ್ರೀತಿಗೆ ಅದರ ರೀತಿಗೆ
ಚೆಲುವ ಕನಸಿನ ಜವನಿಕೆ
ಬೆಳ್ಳಿ ನಿದ್ದೆಯ ತುಟಿಗಳಂಚಲಿ
ಹೊಳೆವ ಕಿರುನಗೆ ತೋರಿಕೆ
ತಂತಿಯಾಚೆಗೆ ವೀಣೆ ಮಿಂಚಿದೆ
ಬೆಂಕಿ ಬೆರಳಿನ ಹಾಡಿಗೆ
ನಿಟ್ಟುಸಿರ ಪಲ್ಲವಿ ಬೇಲಿಯಾಗಿದೆ
ಚಿಂತೆಯಾಳುವ ಕಾಡಿಗೆ
ನಿನ್ನ ಪ್ರೀತಿಗೆ ಅದರ ರೀತಿಗೆ
ನೀಡಬಲ್ಲೆನ ಕಾಣಿಕೆ?
ಕಾಲವಳಿಸದ ನೆಲದ ಚೆಲುವಿಗೆ
ನಿನ್ನ ಪ್ರ್ರಿತಿಯ ಹೋಲಿಕೆ
ಇದು ಹಿಂದಿನ ದಿನಗಳ ಮಾತು. ನನ್ನ ಹತ್ತಿರದ ಗೆಳತಿಯೊಬ್ಬಳು ಈ ಭಾವಗೀತೆಯನ್ನು ಎಲ್ಲೋ ಕೇಳಿ, ಈ ಗೀತೆ ನಾನು ನಿನಗೇ ಹೇಳುತ್ತಿರುವಂತಿದೆ ಅಂಥ ಹೇಳಿ ಕೊಟ್ಟು ಹೋದಳು. ಆ ದಿನ ನನಗೆ ಅದು ಚೆನ್ನಾಗಿದೆ ಅಂಥ ಮಾತ್ರ ಅನ್ನಿಸಿತ್ತು. ಆದರೆ ಅದನ್ನು ನನಗೆ ಕೊಟ್ಟ ಹಿಂದಿನ ಕಾರಣವನ್ನು ಯೋಚಿಸಲೇ ಇಲ್ಲ. ಈಗ ಅವಳು ನನ್ನಿಂದ ಮತ್ತೆ ಸಿಗಲಾರದಷ್ಟು ದೂರ ಹೋಗಿದ್ದಾಳೆ. ಈಗ ನನಗೆ ಅರ್ಥವಾಗುತ್ತಿದೆ ಆ ಗೀತೆಯ ಮೂಲಕ ನನಗೆ ಹೇಳಲೆತ್ನಿಸುತ್ತಿದ್ದ ಭಾವನೆಗಳು. ಆದರೆ ಈಗ ಕಾಲ ಮಿಂಚಿ ಹೋಗಿದೆ. ಅವಳು ನನ್ನ ಕಣ್ಮುಂದೆಯಿಲ್ಲ, ಆದರೆ ಅವಳು ಬಿಟ್ಟುಹೋದ ನೆನಪುಗಳಷ್ಟೇ ನನ್ನ ಕಣ್ಣಲ್ಲಿ ಹಸಿರಾಗಿದೆ. ಗೆಳತಿ ನಿನ್ನ ನೆನಪುಗಳಲ್ಲಿ ನಾನು ದಿನದ ಕೆಲವು ಸಮಯವನ್ನು ಕಳೆಯುತ್ತೇನೆ. ಮನಸ್ಸಿಗೆ ಉಲ್ಲಾಸ ಹರಿದು ಬರುತ್ತದೆ. ನಿನ್ನ ನೆನಪುಗಳಿಗೆ ನಾನು ಋಣಿ. ಕೆಲವೊಮ್ಮೆ ತಪ್ಪು ಮಾಡಿದೆನೇನೋ ಎನ್ನಿಸುತ್ತದೆ. ನಿನ್ನ ನೆನಪುಗಳಲ್ಲಿ………

ಮನಸೇ ಓ ನನ್ನ ಮನಸೇ




ಮನಸೇ ಓ ನನ್ನ ಮನಸೇ
ಏನಾಗಿದೆ ನಿನಗಿಂದು ನನ್ನ ಮನಸೇ
ಚೆಲುವೆಯ ಸ್ಪರ್ಶದಿಂದ ಕರಗಿ ಹೋದ ಆ ಘಳಿಗೆ
ಬಿಡದೆ ಕಾಡಿದೆ ನನ್ನ ಮನಸಿನ ಓಳಗೆ


ನೀನು ನನ್ನ ಸನಿಹ ಇದ್ದ ಆ ಕ್ಷಣಗಳು
ಮರೆಯಲಾಗದಂಥಹ ಸುಂದರ ನೆನಪುಗಳು
ಪದೇ ಪದೇ ಆ ನೆನಪು ಕಾಡುತಿಹುದು
ನಾ ಮಲಗಿದಾಗ ರಾತ್ರಿ ಕಂಡ ಕನಸಿನಲ್ಲಿ ಅಂದು
ಆ ಕನಸನ್ನು ನನಸಾಗಿಸಲು ಹೊರಟಿಹೆ ನಾನಿಂದು


ಸೂತ್ರದಾರ ಆಡಿಸಿದ ಕೈಗೊಂಬೆಯಂತೆ
ನನ್ನ ಬಾಳಾಪುಟದಲಿ ನೀ ನಲಿದಾಡಿದೆ
ಆ ನಲಿದಾಡಿದ ಸವಿ ನೆನಪುಗಳನ್ನು
ಯಾವುದೇ ಕಾರಣಕ್ಕೂ ನನ್ನಿಂದ ಮರೆಯಲಾಗದು


ನೀ ನನ್ನ ಜೊತೆಯಲ್ಲಿ ಇದ್ದಂಥ ದಿನಗಳಲ್ಲಿ
ಬರಿ ಕನಸಿನ ಮೂಟೆಯನ್ನೇ ಹೋತುತಂದೆ
ಆ ಕನಸಿನ ಮೂಟೆಯನ್ನು ನನಸಾಗಿಸಲು
ನಾ ಮಾಡಿದ ಪ್ರಯತ್ನವು  ಫಲಿಸದೇ
ಕಾಮನ ಬಿಲ್ಲಿನಂತೆ ಕರಗಿ ನೀರಾಗಿ ಹೋಯಿತು


ಮಸಣದ ಹೂ


ಮಸಣ ಹೂವೆಂದು ನೀನೇಕೆ ಕೊರಗುವೆ,
ಮಸಣದ ವಾಸಿಯು ಮಹಾದೇವನಲ್ಲವೇ,

ನಿನ್ನ ನನ್ನ ಬಾಲ ದೋಣಿ ಒಂದೇ ತೀರ ಸೇರಲಿ,
ನಿನ್ನ ನನ್ನ ಬಾಲ ದೋಣಿ ಒಂದೇ ತೀರ ಸೇರಲಿ,
ಹೂವು ಗಂಧ ಬೇರೆತಿರುವಂತೆ ನಮ್ಮ ಬಾಳು ಕೂದಲಿ,
ಮುಗಿಯಬೇಕು ನಮ್ಮ ಕಥೆ ಸುಖಾಂತದಲ್ಲಿ......... ಸುಖಾಂತದಲ್ಲಿ.........
ಪಾರ್ವತಿ...........ಪಾರ್ವತೀ............

ಮಸಣ ಹೂವೆಂದು ನೀನೇಕೆ ಕೊರಗುವೆ,
ಮಸಣ ಹೂವೆಂದು ನೀನೇಕೆ ಕೊರಗುವೆ,
ಮಸಣದ ವಾಸಿಯು ಮಹಾದೇವನಲ್ಲವೇ,
ಮಸಣದ ವಾಸಿಯು ಮಹಾದೇವನಲ್ಲವೇ,
ಮಸಣ ಹೂವೆಂದು ನೀನೇಕೆ ಕೊರಗುವೆ..,



ಹೊಂಬಿಸಿಲು


ಹೇಹೇಹೇ........ಓಹೋಹೋಹೋ........ಆಹಾ ಆಹಾಹಾಹಾ.........
ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನಾ ಬಿಟ್ಟು ನನ್ನಾ ನನ್ನಾ ಬಿಟ್ಟು ನಿನ್ನಾ
ಜೀವನಾ ಸಾಗದು ಜೀವನಾ ಸಾಗದು
ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು

ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆಯೆಂದು ನಲಿಯದು
ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆಯೆಂದು ನಲಿಯದು
ಒಲವು ಮೂಡದಿರಲು ಮನವು ಅರಳದು
ಮನವು ಅರಳದಿರಲು ಗೆಲುವು ಕಾಣದು
ಮನವು ಅರಳದಿರಲು ಗೆಲುವು ಕಾಣದು

ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನಾ ಬಿಟ್ಟು ನನ್ನಾ ನನ್ನಾ ಬಿಟ್ಟು ನಿನ್ನಾ
ಜೀವನಾ ಸಾಗದು ಜೀವನಾ ಸಾಗದು
ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು

ಲೋಕದಲ್ಲಿ ಗಂಡು ಹೆಣ್ಣಿಗಾಸರೆ ಆದರಿಲ್ಲಿ ನಾನು ನಿನ್ನಾ ಕೈಸೆರೆ
ಲೋಕದಲ್ಲಿ ಗಂಡು ಹೆಣ್ಣಿಗಾಸರೆ ಆದರಿಲ್ಲಿ ನಾನು ನಿನ್ನಾ ಕೈಸೆರೆ
ಕೂಡಿ ನಲಿವಾ ಆಸೆ ಮನದೀ ಕಾದಿರೆ
ಹಿತವು ಎಲ್ಲಿ ನಾವು ಬೇರೆ ಆದರೆ ,ಹಿತವು ಎಲ್ಲಿ ನಾವು ಬೇರೆ ಆದರೆ

ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನಾ ಬಿಟ್ಟು ನನ್ನಾ ನನ್ನಾ ಬಿಟ್ಟು ನಿನ್ನಾ
ಜೀವನಾ ಸಾಗದು ಜೀವನಾ ಸಾಗದು
ಆಹಾ ...ಹಾ...ಹಾ....ಲ ಲ ಲಾ .......ಹೊಂ ..ಹೊಂ ...ಹೊಂ.....




ಜನ್ಮ ಜನ್ಮದಾ ಅನುಬಂಧ


ಓಹೋ......ಹೋ ............. ಓಹೋ......ಹೋ .............
ತಂಗಾಳಿಯಲ್ಲಿ ನಾನು ತೇಲಿ ಬಂದೆ,
ನಿನ್ನನ್ನು ಪ್ರೀತಿಯಿಂದ ಸೇರಲೆಂದೇ,
ಓ ಇನಿಯಾ .........ಓ ಇನಿಯಾ .........ಆಹಾ ..ಹಾ ...ಹಾ .......
ನನ್ನನು ಸೇರಲು ಬಾ... ಬಾ.... ನನ್ನನು ಸೇರಲು ಓಹೋ......ಹೋ .............

ನಿನ್ನಾ ಎಲ್ಲೂ ಕಾಣದೆ ಹೋಗಿ ,ನನ್ನಾ ಜೀವ ಕೂಗಿ ಕೂಗಿ ,
ಏಕಾಂಗಿಯಾಗಿ ನಾನು ನೊಂದು ಹೋದೆ ,
ಹೀಗೇಕೆ ದೂರ ಮಾಡಿದೆ......ಓ ಇನಿಯಾ .........ಆಹಾ ..ಹಾ ...ಹಾ .......
ನನ್ನನು ಸೇರಲು...ಬಾ...ಬಾ...... ನನ್ನನು ಸೇರಲು ಓಹೋ......ಹೋ .............


ಏತಕೆ ಹೀಗೆ ಅಲೆಯುತಲಿರುವೆ ,
ಯಾರನು ಹೀಗೆ ಹುಡುಕುತಲಿರುವೆ ,
ಕಣ್ಣಲ್ಲಿ ನನ್ನಾ ಬಿಂಬ ಇಲ್ಲವೇನು ,
ನೀ ಕಾಣೆ ಏನು ನನ್ನನು ....ಓ ಇನಿಯಾ .........ಆಹಾ ..ಹಾ ...ಹಾ .......
ನನ್ನನು ಸೇರಲು...ಬಾ...ಬಾ...... ನನ್ನನು ಸೇರಲು

ತಂಗಾಳಿಯಲ್ಲಿ ನಾನು ತೇಲಿ ಬಂದೆ,
ನಿನ್ನನ್ನು ಪ್ರೀತಿಯಿಂದ ಸೇರಲೆಂದೇ,
ಓ ಇನಿಯಾ .........ಓ ಇನಿಯಾ .........ಆಹಾ ..ಹಾ ...ಹಾ .......
ನನ್ನನು ಸೇರಲು ಬಾ... ಬಾ.... ನನ್ನನು ಸೇರಲು ಓಹೋ......ಹೋ ............. 




ಹೀಗೊಂದು ಸಂಜೆ ಬೆಟ್ಟದಲ್ಲಿ…….




ಅದೊಂದು ಸುಂದರ ಸಂಜೆ
ಆಗಸದ ತುಂಬಾ ತಂಪಾದ ಮೋಡಗಳು
ಅದಕ್ಕೆ ತಕ್ಕ ತಂಪಾದ ಗಾಳಿ ಬೀಸುತ್ತಿತ್ತು
ಮೈಯನ್ನು ಸೋಕಿ-ಸೋಕಿ ತಂಪಾಗಿಸುತ್ತಿತ್ತು

ನಾ ತುಸು ದೂರ ಹೆಜ್ಜೆ ಹಾಕುತ್ತಿದ್ದೆ ಬೆಟ್ಟದ ಮಡಿಲಲ್ಲಿ
ನನ್ನ ಹೆಜ್ಜೆಗೆ ಹೆಜ್ಜೆ ಹಾಕುತ್ತಿತ್ತು ನನ್ನ ಗೆಳತಿಯ ಹೆಜ್ಜೆ
ಪ್ರಕೃತಿಯಿಂದ ನಮಗೊಂದು ಉಡುಗೊರೆ ಕಾದಿತ್ತು
ಆಗಸದಿಂದ ತುಂತುರು ಹನಿಗಳು ನಮ್ಮ ಮೇಲೆ ಬೀಳುತ್ತಿತ್ತು
ನನ್ನ ಕೈಯಲ್ಲಿ ಅವಳ ಕೈ ಸೇರಿತ್ತು
ನನ್ನ ಮನಸ್ಸು ಅವಳ ಸ್ಪರ್ಶವನ್ನು ಸವಿಯುತ್ತಿತ್ತು
ನನ್ನ ಕಣ್ಣು ಅವಳ ಕಣ್ಣನ್ನು ದಿಟ್ಟಿಸುತ್ತಿತ್ತು
ನನ್ನ ಕಳ್ಳ ಮನಸ್ಸು ಅವಳತ್ತ ಜಾರುತ್ತಿತ್ತು
ಮನಸ್ಸು ಮುಕ್ತವಾಗಿ ಮಾತಾಡುತ್ತಿತ್ತು
ಭಾವನೆಗಳು ತಂತಾನೆ ಅರಳುತ್ತಿತ್ತು
ಅದೊಂದು ಸುಂದರ ಕ್ಷಣವಾಗಿತ್ತು
ಮರೆಯಲಾಗದ ಒಂದು ಅನುಭವವಾಗಿತ್ತು



ಮುಳ್ಳು
ನಡೆಯುತ್ತಿರುವ ದಾರಿಯೆಲ್ಲಾ ಮುಳ್ಳು ತುಂಬಿರಲು
ಎತ್ತ ಹೆಜ್ಜೆಯಿಡಲಿ ನಾನು
ಮುಳ್ಳುಗಳು ಚುಚ್ಚಿ-ಚುಚ್ಚಿ ರಕ್ತ ಹೊಮ್ಮುತಿರೆ
ಎತ್ತ ವಿಶ್ರಮಿಸಲಿ ನಾನು
ಗುಲಾಬಿಯ ಚೆಲುವು ತೋರಿ
ಕೆಳಗೆ ಹರಡಿವೆ ಮುಳ್ಳುಗಳು
ಗುಲಾಬಿಯ ಅಂದಕ್ಕೆ ಮರುಳಾದದ್ದು ನನ್ನ ತಪ್ಪಾ???
ಅಥವಾ ಅದು ವಾಸ್ತವಿಕತೆಯ ನಿಘೂಡ ಸತ್ಯವಾ???
ದಾರಿಯಲ್ಲಿ ಕಾಣುವುದೆಲ್ಲಾ ಗುಲಾಬಿಗಳೇ
ಅಂದದ ಹಿಂದಿರುವುದು ಬರೀ ಮುಳ್ಳುಗಳೇ
ನಂಬಿ ಮೋಸ ಹೋದದ್ದು ನನ್ನ ತಪ್ಪಾ???
ಅಥವಾ ಈ ಹಾಳು ಪ್ರಪಂಚವೇ ಹೀಗಾ???
ಮುಳ್ಳುಗಳ ಇರಿತದಿಂದ ನೊಂದಿದೆ ಮನಸ್ಸು
ನೋವಿನಿಂದ ಅಳುತ್ತಿದೆ ಮೂಕವಾಗಿ
ಮೌನವೇ ಮನಸ್ಸನ್ನು ಆವರಿಸಿದೆ
ಯಾರಲ್ಲಿ ಹೇಳುವುದು ಈ ಮನದಾಳದ ನೋವಾ???
ಬೀಸುವುದೇ ಒಂದು ಬಿರುಗಾಳಿ???
ಕರೆದೊಯ್ಯುವುದೇ ಮುಳ್ಳುಗಳನ್ನು ಚೆಲ್ಲಾ-ಪಿಲ್ಲಿ ಮಾಡಿ
ನಂತರ ಬೀಸುವುದೇ ತಂಗಾಳಿ???
ಮನಸ್ಸಿನ ನೋವನ್ನು ಮಾಯಮಾಡಿ
ಕಣ್ಣಿಗೆ ಎಲ್ಲವೂ ಅಗೋಚರ
ಹೆಜ್ಜೆಯು ತನಗೆ ತಾನೇ ಸಾಗುತ್ತಿದೆ
ಹೊಟ್ಟೆಯಲ್ಲಿ ಹಸಿವು ಪ್ರಾಣ ಹಿಂಡುತ್ತಿದೆ
ನಾನು ನಡೆಯುತ್ತಿದ್ದೇನೆ ಕತ್ತಲೆಯಲ್ಲಿ
ಹೆಬ್ಬೆರಳ ತುದಿಯಲ್ಲಿ ನೆತ್ತರು ಹರಿಯುತ್ತಿದೆ
ನನಗೆ ತಿಳಿಯಿತು ಎಡವಿದ್ದೇನೆ ನಾನು ದಾರಿಯಲ್ಲಿ
ಆದರೂ ನನಗೆ ಬೇರೆ ದಾರಿಯಿಲ್ಲ
ನಾನು ನಡೆಯುತ್ತಿದ್ದೇನೆ ಕತ್ತಲೆಯಲ್ಲಿ
ಕಣ್ಣಲ್ಲಿ ಕಣ್ಣೀರು ಒಸರುತ್ತಿದೆ
ಕೆನ್ನೆಯ ಮೇಲೆ ಹರಿದೂ-ಹರಿದೂ ಮಣ್ಣ ಸೇರುತ್ತಿದೆ
ಕಣ್ಣೀರ ಒರೆಸಲು ಯಾರೂ ಇಲ್ಲ
ನಾನು ನಡೆಯುತ್ತಿದ್ದೇನೆ ಕತ್ತಲೆಯಲ್ಲಿ
ದಾರಿಯುದ್ದಕ್ಕೂ ಹೆಮ್ಮರಗಳು
ಬೇಡವೆಂದರೂ ತಗುಲಿ-ತಗುಲಿ ಘಾಸಿಗೊಳಿಸುತ್ತಿದೆ
ಮೈಯೆಲ್ಲವೂ ಹುಣ್ಣಾಗಿ ಕೀವು ತುಂಬಿದೆ
ನಾನು ನಡೆಯುತ್ತಿದ್ದೇನೆ ಕತ್ತಲೆಯಲ್ಲಿ
ನಾನು ಸಾಗುತ್ತಿರುವ ದಾರಿ ನಾನರಿಯೆನು
ದಾರಿಯು ಮಸಣಕ್ಕಾ ನಾಕಾಣೆನು
ಆದರೆ ನಡುಗೆ ಮಾತ್ರ ನಿಲ್ಲದು
ನಾನು ನಡೆಯುತ್ತಿದ್ದೇನೆ ಕತ್ತಲೆಯಲ್ಲಿ
ಘಾಡ ಕತ್ತಲೊಳಗೆ ಬೆಳಕಿನ ಕಿರಣ ಹರಿಯುವುದೇ?
ಆ ಕಿರಣದ ಜೊತೆಗೆ ನನ್ನ ಆಶಾಕಿರಣ ಹೊಮ್ಮುವುದೇ?
ನನ್ನ ಜೀವನದ ದಾರಿಯು ನನಗೆ ಕಾಣುವುದೇ?
ನಾನು ನಡೆಯುತ್ತಿದ್ದೇನೆ ಕತ್ತಲೆಯಲ್ಲಿ



ಗೆಳತಿಗೆ ಪ್ರೇಮದ ಪತ್ರ  ಮೊದಲನೆಯದು............
ಹಾಯ್  ಡಿಯರ್
  ನೀನು  ಹೊಳೆಯುವ  ಸೂರ್ಯನಿಗಿಂತ, ಹಸಿರು  ಭೂಮಿಗಿಂತ, ಸಂತೋಷದ  ಪಕ್ಷಿಗಿಂತ, ಹೊಳೆಯುವ  ಹಗಲಿಗಿಂತ, ಚುಕ್ಕೆ  ಕಿರಿತದ ರಾತ್ರಿಗಿಂತ, ಸುಂದರಿಯಾಗಿ  ಕನುತಿಯಾ,
ಪ್ರೀತಿ  ಎಂಬ  ಎರಡರಕ್ಷರದಲ್ಲಿ  ಎನಿಗೆ  ಗೆಳತಿ   ನನ್ನ  ಮನ  ನಿನ್ನ   ನೋಡ್ಹುತಲಿರೆತದೆ ನನ್ನ  ಹೃದಯ  ತಣಿಸು  ಭಾ  ಹೃದಯಗರತಿ,  ಈ  ಹೃದಯಾ   ನಿನ್ನ  ಹೆಜ್ಜೆಯನ್ನು  ಕಾಯುತಿದೆ 
ಬೇರಾಗಿ  ಹಬ್ಬಲಿ  ಪ್ರೀತಿ  ನಮ್ಮೊಲವು  ಸಾವಿರದ  ರೀತಿ 
ನನ್ನ  ಪ್ರೀತಿಯ  ಚಲುವೆ  ....... ರಾನಿಯವರೇ
ನಿಜ  ಹೇಳ್ಹಲೇನೆ ? ನಿನಗೆ  ಕೊಟ್ಟ  ಈ  ಹೃದಯದ   ಮೇಲೆ  ಆನೆ ಮಾಡಿ  ನಿಜ  ಹೇಳ್ಹಲೇನೆ .... ನೀನಿಲ್ಲದ  ಒಂದು  ಕ್ಷಣ  ಕುಡಾ  ಕಲ್ಹೆಯುವದಿಲ್ಲ ... ಒಂದು  ವೇಳೆ  ಕಳೆದು, ಒಂದು  ಕ್ಷಣ  ಎನ್ನುವದು  ಯುಗಂತ್ತೆ  ಕನುತದೆ  ಪ್ರತಿ  ಕ್ಷನಹು  ನಿನ್ನೊಂದಿಗೆ  ಕಳೆಯಬೇಕು  ಅನಿಸುತದೆ, ನಿನ್ನನು  ಎದುರಿಗೆ  ಕೂರಿಸಿಕೊಂಡು  ಹೃದಯದಿಂದ  I LOVE YOU ಅನ್ನ್ನ  ಬೇಕು  ಅನಿಸುತದೆ , ಆದರೆ  ನೀನು  ನಿಮ್ಮೂರಿನಲ್ಲಿ  ಎದ್ದಿಯಾ, ಯಾಕೆ  ನನ್ನ  ಪ್ರೀತಿ  ನಿನಗೆ  ಅರ್ಥವಾಗುತ್ತಿಲ್ಲ?
…...ರನು  ನಾನು  ನನ್ನದೆನುವದು  ಎಲ್ಲವನ್ನು  ನನಗರ್ಪಿಸಿದ್ದೇನೆ. ನೀನು  ಸಹ  ನಿನ್ನ  ಜೊತೆ  ಪ್ರೀತಿಯ  ಬದುಕನ್ನು  ಬದುಕಲು  ಕಾಯುತಿದ್ದೇನೆ  ಪ್ಲೀಸ್  ಎಲ್ಲ  ಎನ್ನಬೇಡ  ಚಲುವೆ 
ಕುಳಿತರು  ನಿನ್ನ  ನೆನಪು 
ನಿಂತರು  ನಿನ್ನ  ನೆನಪ್ಪು 
ಜಳಕ  ಮಾಡುವಲ್ಲು  ನಿನ್ನ  ನೆನ್ನಪು 
ಕನಸಿನ್ನಲ್ಲು  ನಿನ್ನ  ನೆನ್ನಪು 
ನೀನಿಲ್ಲದೆ  ಹೇಗೆ  ಹಚ್ಹಳ್ಳಿ  ದೀಪ????
ನಿನಗೆ  ಸ್ವಲ್ಪವಾದರೂ  ಬುದ್ದಿ  ಎದೆಯಾ? ಸಿಟ್ಟು  ಮಾಡಕೊಲ್ಹಬೇಡ ? ನೀನು  ಪ್ರತಿದಿನಹು  ನನ್ನ  ಕನಸಿನ್ನಲ್ಲಿ  ಬರುತಿಯ  ಹಾಗೇ  ಕನಸಿನ್ನಲ್ಲಿ  ಬಂದು  ಸಾವಿರಾರು  ಮುತ್ತುಗಲ್ಹನು  ಕೊಡುತ್ತಿಯಾ .... ಬಾಚಿ  ತಬಕೊಲ್ಹಬೇಕು? ಎಂದು  ಕೊಲ್ಹುವಾಗ  ಎಚರವಗುತದೆ  ಎದ್ದು  ನೋಡಿದರೆ  ನಿನಿರುವದೆ  ಎಲ್ಲಾ  ಅದರಿಂದ  ನಿನಗೊಂದು   ಕೆಳುತೇನೆ   ಏನೆಂದರೆ  ಪ್ರತಿದಿನ  ನಾನು  ನಿನ್ನ  ನೆನ್ನಪಿನಲ್ಲೇ  ಕ್ಲಾಸ್  ಗೆ  ಹೋಗುತೇನೆ, ನೀನು  ಇಲ್ಲದ  ಹೋದರೆ  ನಾನು  ಬದುಕುವದ್ದಿಲ್ಲ , ನಿನಗೋಸ್ಕರ  ನಾನು  ಪ್ರಾಣ  ಕೊಡಲು  ಸ್ಹಿದ್ದ, ನೀನು  ಊರಿನಲ್ಲಿ   ಇದ್ದಾಗ  ನಿನಗೋಸ್ಕರ  ಸ್ವಲ್ಹ್ಪು  ಸಮಯ  ಈಟ್ಟಿರುತೇನೆ
ನೀನು  ಫೋನಿನಲ್ಲಿ  ಮಾತನಾಡದೆ  ಹೋದರೆ  ಅಂದು  ನನಗೆ  ನಿದ್ದೆ  ಅತ್ತದು, ಸರಿಯಾಗಿ  ಊಟಾ  ಸಹ  ಮಾಡುವದಿಲ್ಲ  ನೀನು  ನನಗೆ  ಬೇಕು,  ಕಣ್ಣೆ, I Love You. I To LoveYou.... ಡಿಯರ್  …..ರಾನಿಯವರೇ 

Thanks & Regards
ನಿನ್ನ  ಪ್ರಿತಿಯನ್ನೇ   ಕಾಯುತಿರುವ  ಇಂತಿ  ನಿನ್ನ  ಗೆಳಯ



ಮತ್ತೆ ಅವ ನೆನಪಾಯಿತು .......

       ಪ್ರತೀ ಸಾರಿಯೂ ನಾನು ಅಂದುಕೊಳ್ಳುತ್ತೇನೆ ಗೆಳತಿ.....ಇನ್ನೂ ನಿನ್ನ ಮರೆತು ಬಿಡಬಿಡಬೇಕು ...ನಾನು, ನನ್ನ ಜೀವನ,ಅಂತ selfish ಆಗಿ ಬದುಕಿಬಿಡಬೇಕು...ನೀನು ಇಲ್ಲದೇನೂ ನಾನು ಜೀವಿಸಬಲ್ಲೆ ಎಂದು ತೋರಿಸಬೇಕು ..ಬರೀ ನಿನ್ನ ನೆನಪಿನ ಕಣ್ಣಿರಷ್ಟೇ ಅಲ್ಲ ನನಗೆ ನಗಲೂ ಬರುತ್ತದೆ ಎಂದು ಸಾರಿ ಸಾರಿ ಹೇಳಬೇಕು.....ನೀನು ಇಲ್ಲದಿದ್ದರೂ ನಿನ್ನ ನೆನಪೊಂದನ್ನು ನನ್ನ ಎದೆಯ ಗೂಡಿನಲ್ಲಿ ಬೆಚ್ಚಗೆ ಕಾದಿರಿಸಿ ಅದನ್ನು ಸವಿಯುತ್ತಾ ಜೀವನ ಕಳೆದು ಬಿಡಬೇಕು...ನಿನ್ನ ಪ್ರತಿಯೊಂದು ಮಾತುಗಳು ಈಗಲೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿದೆ...ನನ್ನಜೊತೆ ನೀನು ಆಡಿದ ಖುಷಿಯ ಮಾತುಗಳು, ನೋವಿನ ಮಾತುಗಳು, ನನ್ನ ಬಗ್ಗೆ ನಿನಗಿದ್ದಪ್ರೀತಿ ಎಲ್ಲವೂ ನೆನಪಿದೆ...ನೀನು ಒಂದು ದಿನ ಹೀಗೆ ನನ್ನ ಬಿಟ್ಟು ಹೋಗುತ್ತಿಯ ಎಂಬ ಕಲ್ಪನೆಯೂ ನನ್ನ ದಿಗಿಲುಗೊಳಿಸುತ್ತಿದ್ದ ಕಾಲವಾಗಿತ್ತು...ಆದರೆ ಗೆಳತಿ ಅದೆಲ್ಲ ಸುಳ್ಳಾಗಿ ಹೋಯಿತು...ನೋಡು ಈಗ ನೀನಿಲ್ಲದೇ ಹೇಗೆ ನಾನು ಎರಡು ವರುಷ ಅಂದರೆ 730 ದಿನಗಳನ್ನು ಕಳೆದುಬಿಟ್ಟೆ...ಅದು ಹೇಗೆ ದಿನಗಳು ಕಳೆದವೋ ನನಗೇ ತಿಳೀ ತಿಲ್ಲ ....ನೆನಪಿಟ್ಟುಕೋ ಗೆಳತಿ ನಿನ್ನನ್ನು ನನ್ನಷ್ಟು ಈ ಜಗತ್ತಿನಲ್ಲಿ ಯಾರು ಪ್ರೀತಿಸಲಾರರು...Its a Challenge!!! ... ತುಂಬಾ ಇಷ್ಟ ಪಟ್ಟು ಬಿಟ್ಟೆ ಗೆಳತಿ ....ತುಂಬಾ ನೇ ...ಯಾಕೆ ಅಷ್ಟು ಇಷ್ಟ ಪಟ್ಟೆ ... I Dont know...I Dont have an valid answer for that..It just happened.....ಆ ನಿನ್ನ ಓರೆ ನೋಟ, ನೀನು ನಿನ್ನ ಕೂದಲನ್ನು ಸರಿ ಮಾಡಿಕೊಳ್ಳುತ್ತಿದ್ದ ರೀತಿ...ಗೆಳತಿ...Believeme your looks were killing me ...ನಿನ್ನ smile ಚೆನ್ನಾಗಿದೆ, ನಿನ್ನ dimple cute ಅಂತೆಲ್ಲಾ ಹೇಳಿದಾಗ ನನ್ನ ಮನಸಲ್ಲೆಲ್ಲ ಆನಂದದ ಸಾಗರ ಉಕ್ಕಿ ಹರಿಯುತಿತ್ತು ....I was so crazy about you!!! ನನ್ನ ಗೆಳತಿ ಯಾಕೆ  ಸುಮ್ಮನೇ ನನ್ನ ರೇಗಿಸುತ್ತಿಯಾ, ಮಾತನಾಡಿದರೆ ನನ್ನ ಬಿಟ್ಟು ಹೋಗುತ್ತೆನೆ ನೋಡುಅಂತ ಹೆದರುಸುತ್ತಿಯಾ.... ಕೂಡಲೇ ನನ್ನ ಕಣ್ಣಿನಿಂದ non-stop ಕಣ್ಣೀರು ಬಂದಿತ್ತು..ನನ್ನ ಸಮಾಧಾನ ಮಾಡಲು ಬಂದ ಅವಳ ನೆನಪುಗಳು ಬೇಡವೆಂದರೂ ಕಾಡುತ್ತವೆ ಗೆಳತಿ ..ಏನು ಮಾಡಲಿ??...ಮನಸ್ಸಿನಲ್ಲಿ ನೋವು ಇಟ್ತ್ಕೊಂಡು ಹೊರಗೆ ನಗುತ್ತಾ ಬಾಳುವುದು ಎಷ್ಟು ಕಷ್ಟ ಎಂದು ತಿಳಿದವರಿಗೆ ಗೊತ್ತು........ನೀನು ಎಲ್ಲೇ ಇರು ಗೆಳತಿ ಆದರೆ ನನ್ನ ಮನಸ್ಸಿನಲ್ಲಿನೀನೆಂದೂ ಇದ್ದೇ ಇರುತ್ತಿಯ... ಅದು ಏನೋ ಹೇಳುತ್ತಾರಲ್ಲ ಗೆಳತಿ...ಹೃದಯ ಕನ್ನೆಡಿ ಇದ್ದಂತೆ ...ಹೇಗೆ ಕನ್ನೆಡಿ ಒಡೆದಾಗ ಪ್ರತೀ ಚೂರಿನಲ್ಲೂಮುಖ ಕಾಣಿಸುತ್ತದೋ ಹಾಗೆ ಗೆಳತಿ...ನನ್ನ ಹೃದಯದ ಪ್ರತೀ ಚೂರಿನಲ್ಲೂ ನಿನ್ನ ಮುಖವೇ ಕಾಣಿಸುತ್ತದೆ...ನನ್ನದೇನುತಪ್ಪಿಲ್ಲ..ಎಲ್ಲ ನನ್ನ ಹೃದಯದ್ದು ...ಸರಿ ಇಷ್ಟೆಲ್ಲಾ ನಿನಗ್ಯಾಕೆ ಹೇಳಬೇಕು ಅಲ್ಲವ? you are not at all bothered about me......ಪರ್ವಾಗಿಲ್ಲ ಗೆಳತಿ...ನನಗೂ challenges ಅಂದ್ರೆ ತುಂಬಾ ಇಷ್ಟ .....ನಿನ್ನ ಬಿಟ್ಟು ಬದುಕುವುದೇ ನನ್ನ Life ನ Challenge ಅಂದುಕೊಳ್ಳುತ್ತೇನೆ...ಇದು ನನಗೆ ಯಾರು ಹಾಕಿದ challenge ಅಲ್ಲ ,ನೀನು ಹಾಕಿದ್ದಲ್ಲ ನನಗೆ ನಾನೇ ಹಾಕಿಕೊಂಡಿದ್ದು .. And I have to win the challenge And win myself ಅಷ್ಟೆ...ಹೋಗುವುದು ಹೋಗಿದ್ದೀಯ ಗೆಳತಿ...ನೀನು ತಿರುಗಿ ಬರುತ್ತೀಯೋ ಇಲ್ಲವೋ ಒಂದು ತಿಳಿದಿಲ್ಲ..ಆದರೆ ಒಂದಂತೂ ನಿಜ ನಿನ್ನತುಂಬಾ ಪ್ರೀತಿಸಿದೆ...ನಿನ್ನನ್ನೇ..ಬರೀ ನಿನ್ನನ್ನೇ...ಮನಸನ್ನು ಗಟ್ಟಿ ಮಾಡಿಕೊಂಡಿದ್ದೇನೆ ಗೆಳತಿ...ನೀನ್ ಇಲ್ಲದೇ ಇರಬೇಕು ಅಂತ...ಹಾಗೆ ಇದೀನಿಕೂಡ..ಆದರೆ ಎಲ್ಲೋ ಒಂದೊಮ್ಮೆ ಭಯವಾಗಿ ಬಿಡುತ್ತೆ....ಎಲ್ಲಿ ನಾನು ಈ Challenge ನಲ್ಲಿ ಸೋತು ಬಿಡುತ್ತೇನೋಅಂತ...ಎಲ್ಲಿ ಜೀವನದಿಂದ ಓಡೀಹೊರಟು ಹೋಗುತ್ತೇನೋ ಅಂತ.....ಹೋಗುವುದಿಲ್ಲ ಗೆಳತಿ ...ಆದರೂ ಮನಸಲೆಲ್ಲ ನಿನ್ನ ನೆನಪುಗಳು ಬೇಡವೆಂದರೂ ಬಂದು ವತ್ತರಿಸಿದಾಗ ಮನಸೆಲ್ಲ ಒಂದೊಮ್ಮೆ ಅಲ್ಲೋಲ ಕಲ್ಲೋಲವಾಗಿರುತ್ತದೆ ...ಹಾಗೆ ಮತ್ತೆ ಸ್ವಲ್ಪ ಸಮಯದ ನಂತರ ಮತ್ತೆ ಶಾಂತ ,ಪ್ರಶಾಂತ ತಿಳಿ ನೀರಿನ ಹಾಗೆ ಮನಸ್ಸು ಕೂಡ...ದೂರದಲ್ಲೆಲ್ಲೋ ನೀನಿದ್ದಿಯ ಒಂದು ದಿನ ನೀನು ಬರುತ್ತಿಯ ಏನೆಲ್ಲಾ ಕನಸುಗಳನ್ನು ಕಟ್ಟಿಕೊಂಡಿದ್ದೆ...ಆದರೆ ಈಗ ನಾನು ನಿನ್ನ ಬಗ್ಗೆಯಾವ ಕನಸನ್ನು ಕಟ್ಟುತ್ತಿಲ್ಲ .....ಮನಸ್ಸು ಈಗ ನಿರ್ಲಿಪ್ತ ನಿಶ್ಚಲ...ಶುಭ್ರ ಬಿಳುಪಿನಂತೆ ಸ್ವಚ್ಛ ... ...

 

ಇಂತಿ ನಿನ್ನ ಗೆಳಯ

vitthal. M.


Thursday, January 20, 2011

ವಿದಾಯ


ಅರಿವಿಲ್ಲದೆ ಹನಿ ಜಾರುತಿಹುದು
ದನಿಯಿಲ್ಲದೆ ಮನ ಬಿಕ್ಕಳಿಸುತಲಿಹುದು
ದೂರವಾಗುವ ದಿನ ಇಂದೇ ಏಕೆ ಬಂದಿಹುದು

ಅಲೆಮಾರಿ ಜೀವನದಲಿ ಊರ ಸೆಲೆ ತಂದವರು 
ತೆಲುಗಿನ ನಡುವೆ ಮತ್ತೆ ತುಳು ಹೊತ್ತು ಬಂದವರು
ಮತ್ತೆ ಭೇಟಿ ಯಾಗುವೆ ಎನ್ನುತ್ತಾ ಮತ್ತೆ ಇಂದು ದೂರ ಸರಿಯುತಿರುವರು,

ಕಳೆದ ಒಂದು ವರುಷದ ಹಲವು ಹರುಷಕೆ ಕಾರಣರಾದವರು
ಇಂದು ಕಣ್ಣೊಳು ಕಂಬನಿ ಬಿರಿಯುತ್ತ ಹೊಸ್ತಿಲಲಿ ನಿಂತಿಹರು
ಒಳಗೆ ಮನ ಅಳುತ್ತಿದ್ದರು ಮುಗುಳ್ನಗೆ ಬೀರುತಾ ನಗುತ್ತಿರುವರು

ಎಲ್ಲೇ ಹೋದರು ಸಂತೋಷ ನಿಮ್ಮ ಪಾಲಿಗಿರಲಿ
ಪ್ರತಿ ಹೆಜ್ಜೆಗೂ ನಗೆ ಹೂವು ಅರಳುತ ಶುಭ ಕೋರಲಿ
ನನ್ನ ನೆನಪಿನ ಭುತ್ತಿಲಿ  ನಿಮ್ಮ ಪಾಲು ಎಂದೆಂದಿಗೂ ಇರಲಿ 



ವಿದಾಯ

ಅರಿವಿಲ್ಲದೆ ಹನಿ ಜಾರುತಿಹುದು
ದನಿಯಿಲ್ಲದೆ ಮನ ಬಿಕ್ಕಳಿಸುತಲಿಹುದು
ದೂರವಾಗುವ ದಿನ ಇಂದೇ ಏಕೆ ಬಂದಿಹುದು

ಅಲೆಮಾರಿ ಜೀವನದಲಿ ಊರ ಸೆಲೆ ತಂದವರು 
ತೆಲುಗಿನ ನಡುವೆ ಮತ್ತೆ ತುಳು ಹೊತ್ತು ಬಂದವರು
ಮತ್ತೆ ಭೇಟಿ ಯಾಗುವೆ ಎನ್ನುತ್ತಾ ಮತ್ತೆ ಇಂದು ದೂರ ಸರಿಯುತಿರುವರು,

ಕಳೆದ ಒಂದು ವರುಷದ ಹಲವು ಹರುಷಕೆ ಕಾರಣರಾದವರು
ಇಂದು ಕಣ್ಣೊಳು ಕಂಬನಿ ಬಿರಿಯುತ್ತ ಹೊಸ್ತಿಲಲಿ ನಿಂತಿಹರು
ಒಳಗೆ ಮನ ಅಳುತ್ತಿದ್ದರು ಮುಗುಳ್ನಗೆ ಬೀರುತಾ ನಗುತ್ತಿರುವರು

ಎಲ್ಲೇ ಹೋದರು ಸಂತೋಷ ನಿಮ್ಮ ಪಾಲಿಗಿರಲಿ
ಪ್ರತಿ ಹೆಜ್ಜೆಗೂ ನಗೆ ಹೂವು ಅರಳುತ ಶುಭ ಕೋರಲಿ
ನನ್ನ ನೆನಪಿನ ಭುತ್ತಿಲಿ  ನಿಮ್ಮ ಪಾಲು ಎಂದೆಂದಿಗೂ ಇರಲಿ

ನೆನಪು- ಮೆಲುಕು

ಚಿಟಪಟ ಪಟ ಮಳೆಹನಿ ಪುಟಿದು ಬಾನಿಂದ ಜಾರಿದೆ
ಮನದ ದಡದಲಿ ಪ್ರೀತಿಯಲೆ ಬಡಿದು ನವ ಭಾವ ಜಿನುಗುತಿದೆ
ಕೇಳದ ರಾಗವ ಇಂದು ಮನ ಗುನುಗುನಿಸುತ್ತಿದೆ
ಇಷ್ಟುದಿನ ವಿರದ ಈ ನವ ನೋವು ಇಂದು ಹಿತ ತಂದಿದೆ

ಮೂಡಣದ ಅಂಚಲ್ಲಿ ಮೂಡಿದ ಕಾಮನಬಿಲ್ಲು ನವ ಬಣ್ಣ ತಂದಿದೆ ಕಂಡ ಕನಸಿಗೆ
ಪಡುವಣದಿ ಬಾಗುವ ರವಿಯು ವಾರಿಧಿ ಕೆನ್ನೆಗೆ ಮುತ್ತಿಕ್ಕಿದೆ
ತಣ್ಣನೆಯ ಬೀಸುವ ಗಾಳಿಲಿ ನಿನ್ನ ಮುಂಗುರುಳ ತಳಮಳ ಹೆಚ್ಚಾಗಿದೆ
ಅದ ನೋಡುತ ಸೋತ ನನ್ನೀಮನದ ಕಳವಳ ಅತಿಯಾಗಿದೆ

ಇರುಳಿನ ಪ್ರಭೆ ಶೋಭಿಸಲು ಗೂಡಸೇರಲು ಹೊರಟ ಪಕ್ಷಿಗಳು
ಮರಳಿನ ಆಟ ಮುಗಿಸಿ ಮನೆ ಕಡೆಗೆ ಹೊರಟ ಜೋಡಿ ಹೆಜ್ಜೆಗಳು
ನಿನ್ನೊಂದಿಗಿನ ಆ ವಿಹಾರದ ನೆನಪುಗಳೇ ನನ್ನ ಪ್ರತಿದಿನದ ಮೆಲುಕುಗಳು
ಮರೆಯಾದರು ಮರೆಯಲಾಗದ ಎದೆಯೊಳಗಿನ ಮಧುರ ಪುಳಕಗಳು 

ನಿ-ವೇದನೆ
 ಆಮಂತ್ರಣ ವಿರದ ಹೃದಯದ ಸಡಗರದ ಆಚರಣೆಗೆ ನೀಬರಬೇಕಿದೆ
ಯಾರು ಕೊಡದ ಪ್ರಿತಿಯುಡುಗೊರೆ ನೀನೀಡಬೇಕಿದೆ
ವಸಂತದಿ ಕೋಗಿಲೆ ಬಂದು ಮಾಮರ ಸೇರಿದಂತೆ
ಮರೆತೋದ ಇಂಪಾದದನಿ ಮತ್ತೆ ಕೇಳಿಸಿದಂತೆ

ಯಾರು ಬಂದಿದರದ ಈ ಮನಸಲಿ ನಿನ್ನ ಆಗಮನ ವಾಗಲಿ
ಬರೇ ಪುಳಕ ತುಂಬಿರಲಿ ಮಾತು ಹೊರಡದ ಬಾಯಲಿ
ತೋಳಲಿ ನೀನಿರಲು ಸಂಭ್ರಮದ ಕಂಬನಿ ಜಾರುತಿರಲಿ ಕಣ್ಣಲಿ
ನಿದಿರೆ ಬಾರದ ಕಣ್ಣಿಗೆ ನೀ ಬಾರೆ ಹಗಲು ಕನಸಾಗಿ

ಪ್ರೀತಿಯ ವಿನಿಮಯದ ವ್ಯವಹಾರ ಎಗ್ಗಿಲ್ಲದೆ ನಡೆಯಲಿ
ಯಾರಿರದ ಒಂಟಿ ಗ್ರಾಹಕ-ಧಾರಕ ಸಂತೆಯೋಳು
ಬೆಚ್ಚನೆಯ ಗೂಡಲಿ ಬಚ್ಚಿ ಇಟ್ಟ ಪ್ರೀತಿ ಗುಬ್ಬಿ
ನಿನ್ನ ಹೃದಯ ಗೂಡಿಗೆ  ರೆಕ್ಕೆ ಬಿಚ್ಚಿ ಹಾರಲಿ